ಶಬರಿಮಲೆ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಮಹಿಳೆಯರಿಂದ ಪ್ರತಿಭಟನಾ ಆಂದೋಲನ 
ದೇಶ

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಂದ `ಮುಟ್ಟು ಆಂದೋಲನ'

ಮಹಿಳೆಯರು ಮುಟ್ಟಾಗಿದ್ದಾರೆಯೇ ಇಲ್ಲ ಶುದ್ಧವಾಗಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚುವ ಯಂತ್ರದ ಮೂಲಕ ಪರೀಕ್ಷಿಸಿದ ಮೇಲೆಯೇ ಶಬರಿಮಲೆ...

ಕೊಚ್ಚಿ: ಮಹಿಳೆಯರು ಮುಟ್ಟಾಗಿದ್ದಾರೆಯೇ ಇಲ್ಲ ಶುದ್ಧವಾಗಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚುವ ಯಂತ್ರದ ಮೂಲಕ ಪರೀಕ್ಷಿಸಿದ ಮೇಲೆಯೇ ಶಬರಿಮಲೆ ದೇಗುಲದೊಳಗೆ ಮಹಿಳೆಯರನ್ನು ಬಿಡಬೇಕು ಎಂಬ ದೇಗುಲದ ಆಡಳಿತ ಮಂಡಳಿ ಮುಖ್ಯಸ್ಥ ಪ್ರಯಾರ್ ಗೋಪಾಲಕೃಷ್ಣನ್‌ ಹೇಳಿಕೆ ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಆಂದೋಲನ ಆರಂಭವಾಗಿದೆ.

ಕಳೆದ ಶನಿವಾರ, ಫೇಸ್‌ ಬುಕ್‌ನಲ್ಲಿ ಕೆಲ ಮಹಿಳೆಯರು "ಹ್ಯಾಪಿ ಟು ಬ್ಲೀಡ್‌' (ಮುಟ್ಟಾಗುವುದಕ್ಕೆ ಸಂತೋಷವಿದೆ)ಎಂಬ ಪುಟ ತೆರೆದು ಆಂದೋಲನ ಆರಂಭಿಸಿದ್ದಾರೆ.ಇದಕ್ಕೆ ಸಮಾಜದ ವಿವಿಧ ವರ್ಗಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಫೇಸ್ ಬುಕ್ ಖಾತೆ ಹೊಂದಿರುವ ಮಹಿಳೆಯರು ನಿಮ್ಮ ಫೇಸ್‌ಬುಕ್‌ ಪ್ರೊಫೈಲಲ್ಲಿ ಭಿತ್ತಿಪತ್ರಗಳ ಮೂಲಕ, ಸ್ಯಾನಿಟರಿ ನ್ಯಾಪ್‌ಕಿನ್‌ ಮೂಲಕ, ಚಾರ್ಟ್‌ಗಳ ಮೂಲಕ ಇದೇ  ಹೇಳಿಕೆಯನ್ನು ಬರೆದು, ಬೆಂಬಲ ನೀಡಿ ಎಂದು ಕೋರಿದ್ದಾರೆ.

ಕೇರಳ ರಾಜ್ಯದ ಪ್ರಸಿದ್ಧ ದೇಗುಲ ಶಬರಿಮಲೆಗೆ ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಪ್ರತಿನಿತ್ಯ ಆಗಮಿಸುತ್ತಾರೆ. ಆದರೆ ಮಹಿಳೆಯರ ಪ್ರವೇಶಕ್ಕೆ ಇಲ್ಲಿ ಅವಕಾಶ ನೀಡುವುದಿಲ್ಲ. ಶಬರಿಮಲೆ ದೇವರು ಅಯ್ಯಪ್ಪ ಬ್ರಹ್ಮಚಾರಿ ಆಗಿರುವುದಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಸಣ್ಣ ಮಕ್ಕಳು ಮತ್ತು ಮುಟ್ಟು ನಿಂತಿರುವ ವೃದ್ಧೆಯರಿಗೆ ಮಾತ್ರ ದೇವಾಲಯದೊಳಗೆ ಪ್ರವೇಶವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ