ಮುಖ್ತಾರ್ ಅಬ್ಬಾಸ್ ನಖ್ವಿ 
ದೇಶ

ಸಹಿಷ್ಣುತೆ ಭಾರತೀಯರ ಡಿಎನ್‌ಎದಲ್ಲೇ ಇದೆ: ಕೇಂದ್ರ ಸಚಿವ ನಖ್ವಿ

ಬಾಲಿವುಡ್ ನಟ ಆಮಿರ್ ಖಾನ್ ಅವರ ಅಸಹಿಷ್ಣುತೆ ಹೇಳಿಕೆ ವಿವಾದ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸಹಿಷ್ಣುತೆ ಭಾರತೀಯರ...

ನವದೆಹಲಿ: ಬಾಲಿವುಡ್ ನಟ ಆಮಿರ್ ಖಾನ್ ಅವರ ಅಸಹಿಷ್ಣುತೆ ಹೇಳಿಕೆ ವಿವಾದ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸಹಿಷ್ಣುತೆ ಭಾರತೀಯರ ಡಿಎನ್‌ಎದಲ್ಲೇ ಇದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಬುಧವಾರ ಹೇಳಿದ್ದಾರೆ.

'ಸಹಿಷ್ಣುತೆ ಭಾರತೀಯರ ಡಿಎನ್‌ಎದಲ್ಲೇ ಇದೆ. ಅಸಹಿಷ್ಣುತೆಗೆ ದೇಶದಲ್ಲಿ ಜಾಗ ಇಲ್ಲ. ಜನ ರಾಜಕೀಯ ಪ್ರೇರಿತ ಪ್ರಭಾವಕ್ಕೆ ಒಳಗಾಗಬಾರದು' ಎಂದು ನಖ್ವಿ ಹೇಳಿದ್ದಾರೆ.

'ದೇಶದಲ್ಲಿ ಶಾಂತಿ ಮತ್ತು ಸಾಮರಸ್ಯ ಬಯಸುವುದು ತಪ್ಪಲ್ಲ. ಇದಕ್ಕಾಗಿ ಆಮಿರ್ ಖಾನ್ ಅವರು ದೇಶ ಬಿಡುವ ಅಗತ್ಯವೂ ಇಲ್ಲ. ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು ಮತ್ತು ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗಬಾರದು' ಎಂದಿದ್ದಾರೆ.

ದೇಶದಲ್ಲಿ ಅಸಹಿಷ್ಣುತೆ ವಿರುದ್ಧದ ಸಾಂಸ್ಕೃತಿಕ ವಲಯದ ಜನಾಗ್ರಹಕ್ಕೆ ದನಿಗೂಡಿಸಿದ್ದ  ಆಮೀರ್ ಖಾನ್, ಈ ವಾತಾವರಣದಿಂದ ಭೀತಗೊಂಡು ದೇಶ ತೊರೆದು ಹೋಗೋಣ ಎಂದು ಪತ್ನಿ ಸಲಹೆ ನೀಡಿರುವುದಾಗಿ ಹೇಳಿದ್ದರು. ಇದು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT