ತಿರುವನಂತಪುರಂ: ಆನ್ ಲೈನ್ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಆರೋಪ ಎದುರಿಸುತ್ತಿರುವ ಕೇರಳ ಕಿಸ್ ಆಫ್ ಲವ್ ಕಾರ್ಯಕ್ರಮದ ಸಂಘಟಕರಾದ ರಶ್ಮಿ ಆರ್ ನಾಯರ್ ತನ್ನ ಪತಿ ರಾಹುಲ್ ವಿರುದ್ಧ ಗಂಭೀರ ಆರೋಪ ಮಾಡಿದ್ದು, ವೇಶ್ಯಾವಾಟಿಕೆಗೆ ತನ್ನ ಪತಿಯೇ ಒತ್ತಾಯಿಸುತ್ತಿದ್ದ ಎಂದು ಹೇಳಿಕೆ ನೀಡಿದ್ದಾರೆ.
ಕೆರಳದ ಪತ್ರಿಕೆಗಳ ವರದಿ ಪ್ರಕಾರ, ತನ್ನ ಅಶ್ಲೀಲ ಚಿತ್ರಗಳನ್ನು ಇಂಟರ್ ನೆಟ್ ನಲ್ಲಿ ಅಪ್ ಲೋಡ್ ಮಾಡುತ್ತಿದ್ದ ಕಿಸ್ ಆಫ್ ಲವ್ ಸಂಘಟಕ ರಾಹುಲ್ ಪಶುಪಾಲನ್, ಹೈಪ್ರೊಫೈಲ್ ಜನರೊಂದಿಗೆ ವೇಶ್ಯಾವಾಟಿಕೆ ನಡೆಸಲು ಒತ್ತಾಯಿಸುತ್ತಿದ್ದ ಎಂದು ರಶ್ಮಿ ಪೊಲೀಸರೆದುರು ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ರಶ್ಮಿ ಹಾಗೂ ರಾಹುಲ್ ನಡೆಸುತ್ತಿದ್ದ ಆನ್ ಲೈನ್ ವೇಶ್ಯಾವಾಟಿಕೆ ಬಗ್ಗೆ ರಾಹುಲ್ ಪೋಷಕರಿಗೂ ಅನುಮಾನ ಬಂದಿತ್ತು ಎಂದು ಹೇಳಲಾಗಿದೆ. ಅಪ್ರಾಪ್ತ ಬಾಲಕಿಯರ ಅಶ್ಲೀಲ ಚಿತ್ರಗಳನ್ನು ಅಪ್ ಲೋಡ್ ಮಾಡುತ್ತಿದ್ದ ಫೇಸ್ ಬುಕ್ ಪೇಜ್ ನ್ನು ರಾಹುಲ್ ರಶ್ಮಿಯ ಹೆಸರಿನಲ್ಲೇ ನಿರ್ವಹಿಸುತ್ತಿದ್ದ. ಅಪ್ರಾಪ್ತ ಬಾಲಕಿಯರನ್ನು ಬಳಸಿಕೊಂಡು ಆನ್ ಲೈನ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಡಿ ಕಿಸ್ ಆಫ್ ಲವ್ ರಾಹುಲ್ ಪಶುಪಾಲನ್ ಹಾಗೂ ರಶ್ಮಿ ನಾಯರ್ ಅವರನ್ನು ಬಂಧಿಸಿದ್ದರು.