ಹರ್ಯಾಣ: ಅಕ್ರಮ ಮದ್ಯ ತಡೆ ವಿಚಾರದಲ್ಲಿ ಆರೋಗ್ಯ ಸಚಿವ ಅನಿಲ್ ವಿಜ್ ಹಾಗೂ ಮಹಿಳಾ ಎಸ್ಪಿ ಸಂಗೀತಾ ಕಾಲಿಯವರ ನಡುವೆ ಮಾತಿನ ಚಕಮಕಿ ನಡೆದಿದೆ.
ಅಕ್ರಮ ಮದ್ಯೆ ತಡೆಗೆ ಏನು ಕ್ರಮಕೈಗೊಂಡಿದ್ದಿರಾ ಎಂದು ಮಹಿಳಾ ಎಸ್ಪಿಯನ್ನು ಸಚಿವರು ಪ್ರಶ್ನಿಸಿದ್ದಾರೆ. ಈ ವೇಳೆ ಉತ್ತರ ನೀಡಿದ ಎಸ್ಪಿ ಸಂಗೀತಾ, ಸ್ಥಳೀಯರ ದೂರಿನ ಮೇರೆಗೆ 2500 ಪ್ರಕರಣ ದಾಖಲಿಸಿದ್ದೇವೆ ಎಂದು ವಿವರಿಸಿದರು. ಇದಕ್ಕೆ ತೃಪ್ತರಾಗದ ಸಚಿವರು, ಇದು ಸಾಲದು, ನಿಮ್ಮ ಪೊಲೀಸ್ ಇಲಾಖೆ ಕಾರ್ಯವೈಖರಿ ಸರಿಯಿಲ್ಲ ಎಂದು ತರಾಟೆಗೆ ತೆಗೆದುಕೊಂಡದರು.
ಈ ಮಾತಿನಿಂದ ಕೆರಳಿದ ಎಸ್ಪಿ ಸಂಗೀತಾ, ಮದ್ಯ ಮಾರಾಟಕ್ಕೆ ನಿಮ್ಮ ಇಲಾಖೆಯಿಂದಲೇ ಪರವಾನಿಗೆ ನೀಡಿದ್ದೀರಾ, ಮತ್ತೆ ಕ್ರಮಕೈಗೊಳ್ಳಿ ಎಂದು ನಮ್ಮನ್ನು ದಬಾಯಿಸುತ್ತೀರಾ ಅಂತ ಸಚಿವರೇ ತಿರುಗೇಟು ನೀಡಿದ್ದಾರೆ.
ಇದರಿಂದ ಆಕ್ರೋಶಗೊಂಡ ಸಚಿವ ಅನಿಲ್ ವಿಜ್ ಎಸ್ಪಿಯನ್ನು ಸಭೆಯಿಂದ ಹೊರ ಹೋಗಿ ಎಂದು ಗದರಿಸಿದ್ದಾರೆ. ಆದರೆ ಎಸ್ಪಿ ಸಂಗೀತಾ ಸಭೆಯಿಂದ ಹೊರಗೆ ಹೋಗದ್ದರಿಂದ ಸಚಿವ ಅನಿಲ್ ವಿಜ್ಯೇ ಸಭೆ ಬಿಟ್ಟು ಹೊರಟು ಹೋಗಿದ್ದಾರೆ.