ದೇಶ

ವಾಯುದಾಳಿ ಭೀತಿ; ಗೋವಾ ಪ್ರವಾಸ ಕೈಗೊಳ್ಳದಂತೆ ನಾಗರಿಕರಿಗೆ ರಷ್ಯಾ ಸಲಹೆ

Sumana Upadhyaya

ಕಲಂಗುಟೆ : ಗೋವಾದ ಪ್ರವಾಸೋದ್ಯಮಕ್ಕೆ ಮತ್ತೊಂದು ಹೊಡೆತ ಬಿದ್ದಿದ್ದು, ಭದ್ರತಾ ದೃಷ್ಟಿಯಿಂದ ದೇಶದ ಪ್ರವಾಸಿಗರು ಗೋವಾಕ್ಕೆ ಪ್ರವಾಸ ಹೋಗಬಾರದು ಎಂದು ರಷ್ಯಾ ಸಲಹೆ ನೀಡಿದೆ ಎಂದು ಅಲ್ಲಿನ ಸುದ್ದಿ ಸಂಸ್ಥೆ ಇಂಟರ್ ಫ್ಯಾಕ್ಸ್ ವರದಿ ಮಾಡಿದೆ.
ಈಜಿಪ್ಟ್ ಮತ್ತು ಟರ್ಕಿಯನ್ನು ಕೂಡ ಕಪ್ಪು ಪಟ್ಟಿಗೆ ಸೇರಿಸಲಾಗಿದ್ದು,ಪಟ್ಟಿಯಲ್ಲಿ ಗೋವಾದ ಹೆಸರನ್ನು ಕೈ ಬಿಡಲಾಗಿದೆ. ಕ್ಯೂಬಾ , ಉತ್ತರ ವಿಯೆಟ್ನಾಂ ಮತ್ತು ದಕ್ಷಿಣ ಚೀನಾ ಪ್ರವಾಸ ಕೈಗೊಳ್ಳಲು ಸುರಕ್ಷಿತ ತಾಣಗಳೆಂದು ಹೇಳಿದೆ.

ಐಸಿಸ್‌ ಉಗ್ರರ ವಿರುದ್ಧ ಸಮರ ಸಾರಿರುವ ರಷ್ಯಾ  ಮತ್ತು ಆ ದೇಶದ ನಾಗರಿಕರನ್ನು ಗುರಿಯಾಗಿರಿಸಿಕೊಂಡು  ಭಾರೀ ದಾಳಿ ಮಾಡಲು ಉಗ್ರರು ಸಜ್ಜಾಗಿದ್ದಾರೆ. ಗೋವಾಕ್ಕೆ ಬರುತ್ತಿರುವ ವಿದೇಶಿ ಪ್ರವಾಸಿಗರಲ್ಲಿ ಅತಿ ಹೆಚ್ಚು ರಷ್ಯಾ ಪ್ರವಾಸಿಗರಾಗಿದ್ದು,2013 ರಲ್ಲಿ 2,50,000 ಪ್ರವಾಸಿಗರು ಭೇಟಿ ನೀಡಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.ಅವರನ್ನು ಗುರಿಯಾಗಿರಿಸಿಕೊಂಡು ಉಗ್ರ ದಾಳಿ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

SCROLL FOR NEXT