ಪ್ರಧಾನಿ ನರೇಂದ್ರ ಮೋದಿ 
ದೇಶ

ಬೋನಸ್ ಕಾಯ್ದೆ ತಿದ್ದುಪಡಿಗೆ ಚಿಂತನೆ

ಕಾರ್ಮಿಕ ವರ್ಗಕ್ಕೆ ಅನುಕೂಲವಾಗುವಂತೆ ಬೋನಸ್ ಕಾಯಿದೆಯನ್ನು ಪರಿಷ್ಕರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ...

ನವದೆಹಲಿ: ಕಾರ್ಮಿಕ ವರ್ಗಕ್ಕೆ ಅನುಕೂಲವಾಗುವಂತೆ ಬೋನಸ್ ಕಾಯಿದೆಯನ್ನು ಪರಿಷ್ಕರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸಂಸತ್ತಿನಲ್ಲಿ ಹೇಳಿದ್ದಾರೆ.
ಬೋನಸ್ ಕಾಯಿದೆಯನ್ನು ತಿದ್ದುಪಡಿ ಮಾಡಲು ಪ್ರಮುಖ ವಿಧೇಯಕವೊಂದನ್ನು ಮಂಡಿಸಲಿದ್ದೇವೆ. ಸಂಪುಟ ಈಗಾಗಲೇ ಅದನ್ನು ಒಪ್ಪಿದೆ. ಇದು ಕಾರ್ಮಿಕ ವರ್ಗಗಳಿಗೆ ಅನುಕೂಲವಾಗಲಿದ್ದು, ಅವರ ಹಿತಕ್ಕನುಗುಣವಾಗಿ ಅದನ್ನು ರೂಪಿಸಲಿದ್ದೇವೆ ಎಂದು ಲೋಕಸಭೆಯಲ್ಲಿ ಎರಡು ದಿನಗಳ ಕಾಲ ನಡೆದ ಸಂವಿಧಾನ ಕುರಿತ ಚರ್ಚೆಯ ಅಂತ್ಯದಲ್ಲಿ ಪ್ರಧಾನಿ ಹೇಳಿದರು. 
ಕಾರ್ಮಿಕರಿಗೆ 8 ಗಂಟೆ ದುಡಿಯುವ ಸಮಯ ವನ್ನು ನಿಗದಿಪಡಿಸಿದ ಡಾ.ಅಂಬೇಡ್ಕರ್ ಕೊಡುಗೆ ಸ್ಮರಿಸಿದರು. ಫ್ಯಾಕ್ಟರಿ ಹಾಗೂ 20ಕ್ಕಿಂತ ಅಧಿಕ ಉದ್ಯೋಗಿಗಳಿರುವ ಸಂಸ್ಥೆಯ ಉದ್ಯೋಗಿಯ ಬೋನಸ್ ನಿಗದಿಪಡಿಸಲು ಸಂಬಳ ಮಿತಿ ರು. 7,000 ಎಂದು ಸರ್ಕಾರ ಮೊದಲು ನಿಗದಿಪಡಿಸಿತ್ತು. 
ಬಳಿಕ ಅದನ್ನು ರು.10,000ದಿಂದ ರು.21,000ಕ್ಕೆ ಏರಿಸಲು ಉದ್ದೇಶಿಸಿದೆ. ಜತೆಗೆ, ಇಪಿಎಫ್  ಯೋಜನೆಯಲ್ಲಿ ತಿಂಗಳ ಪಿಂಚಣಿ ಕನಿಷ್ಠ ರು.1,000 ನಿಗದಿಪಡಿಸಲಾಗುತ್ತಿದೆ ಎಂದು ಮೋದಿ ತಿಳಿಸಿದರು. ಸಂಪುಟದ ನಿರ್ಧಾರದಂತೆ ಹೊಸ ಕಾಯಿದೆ 2015ರ ಏ_ 1ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ. ಈ ಕಾಯಿದೆಯ 12ನೇ ವಿಧಿಯನ್ನು ಬದಲಾಯಿಸಲೂ ಕೇಂದ್ರ ಮುಂದಾಗಿದೆ. ಇದುವರೆಗೆ, ರು. 3,500ಕ್ಕಿಂತ ಅಧಿಕ ಸಂಬಳ ಹೊಂದಿರುವ ಸಿಬ್ಬಂದಿಯ ಬೋನಸ್ ಅನ್ನು ರು. 3,500ರ ಮಿತಿಯಲ್ಲಿ ಲೆಕ್ಕ ಹಾಕಲಾಗುತ್ತಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video