ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ನವಾಜ್ ಶರೀಫ್ 
ದೇಶ

ಶರೀಫ್'ಯೊಂದಿಗಿನ ಹಸ್ತಲಾಘವ ಮೋದಿ ಸಹಿಷ್ಣುತೆಯನ್ನು ಸೂಚಿಸುತ್ತದೆ: ಶಿವಸೇನೆ

ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಯೊಂದಿಗಿನ ಹಸ್ತಲಾಘವ ನಮ್ಮ ಪ್ರಧಾನಿ ಮೋದಿಯವರಲ್ಲಿರುವ ಸಹಿಷ್ಣುತೆಯನ್ನು ಸೂಚಿಸುತ್ತದೆ ಎಂದು ಶಿವಸೇನೆ ಮಂಗಳವಾರ ಹೇಳಿದೆ...

ನವದೆಹಲಿ: ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಯೊಂದಿಗಿನ ಹಸ್ತಲಾಘವ ನಮ್ಮ ಪ್ರಧಾನಿ ಮೋದಿಯವರಲ್ಲಿರುವ ಸಹಿಷ್ಣುತೆಯನ್ನು ಸೂಚಿಸುತ್ತದೆ ಎಂದು ಶಿವಸೇನೆ ಮಂಗಳವಾರ ಹೇಳಿದೆ.

ಈ ಕುರಿತಂತೆ ಮಾತನಾಡಿರುವ ಸಂಜಯ್ ರಾವತ್ ಅವರು, ಪ್ಯಾರೀಸ್ ನಡೆಯುತ್ತಿರುವ ಹವಾಮಾನ ಶೃಂಗಸಭೆ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನವಾಜ್ ಶರೀಫ್ ಅವರೊಂದಿಗೆ ತಾವೇ ಹೋಗಿ ಹಸ್ತಲಾಘವ ಮಾಡಿರುವುದು ಅವರಲ್ಲಿರುವ ಸಹಿಷ್ಣುತೆಯನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.

ಅಸಹಿಷ್ಣುತೆ ಎಂಬ ಕೂಗು ಇದೀಗ ದೇಶದೆಲ್ಲೆಡೆ ಕೇಳಿಬರುತ್ತಿದ್ದು, ಮೋದಿಯವರ ವಿರುದ್ಧ ಹಲವು ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲೇ ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯವರು ನವಾಜ್ ಶರೀಫ್ ಅವರನ್ನು ನೋಡಿದ ಕೂಡಲೇ ಅವರೇ ಸ್ವತಃ ನಡೆದುಕೊಂಡು ಹೋಗಿ ಶರೀಫ್ ಅವರಿಗೆ ಹಸ್ತಲಾಘವ ಮಾಡಿದರು. ಇದು ನಮ್ಮ ಪ್ರಧಾನಿಯಲ್ಲಿರುವ ಸಹಿಷ್ಣುತೆಯನ್ನು ಸೂಚಿಸುತ್ತದೆ.

ಭಯೋತ್ಪಾದನೆಯನ್ನು ಪ್ರಚಾರ ಮಾಡುವುದು ದೇಶದಲ್ಲಿ ದೊಡ್ಡ ಅಸಹಿಷ್ಣುತೆಯಾಗಿದೆ. ಅಂತಹುದ್ದನ್ನು ನವಾಜ್ ಶರೀಫ್ ಅವರು ಮಾಡಿದ್ದಾರೆ. ಮೊದಲು ಭಯೋತ್ಪಾದನೆ ಕುರಿತ ಚರ್ಚೆಗಳನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಲಸೆ ವೀಸಾ ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಲಸೆ ನೀತಿ ಮತ್ತಷ್ಟು ಕಠಿಣ, ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌..!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!