ದೇಶ

ಹಿಂದೂ ನಾಯಕ ತಪ್ಪು ಹೇಳಿಕೆ ಪ್ರಸ್ತಾಪ: ಸಲೀಂಗೆ ಧನ್ಯವಾದ ಹೇಳಿ; ರಾಜನಾಥ್'ಗೆ ಯೆಚೂರಿ

Manjula VN

ನವದೆಹಲಿ: 800 ವರ್ಷಗಳ ಬಳಿಕ ಹಿಂದೂ ನಾಯಕರೊಬ್ಬರು ಪ್ರಧಾನಿಯಾಗಿದ್ದಾರೆಂಬ ತಪ್ಪು ಹೇಳಿಕೆಯನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದ ಸಿಪಿಎಂ ನಾಯಕ ಮೊಹಮ್ಮದ್ ಸಲೀಂ ಅವರಿಗೆ ಧನ್ಯವಾದ ಹೇಳಿ ಎಂದು ಸಿಪಿಐ(ಎಂ)ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ರಾಜನಾಥ ಸಿಂಗ್ ಅವರಿಗೆ ಮಂಗಳವಾರ ಹೇಳಿದ್ದಾರೆ.

ಹಿಂದೂ ನಾಯಕ ತಪ್ಪು ಹೇಳಿಕೆಯೊಂದು ನಿನ್ನೆ ನಡೆದ ಸಂಸತ್ ಕಲಾಪವನ್ನು ಎರಡೂ ಬಾರಿ ಮುಂದೂಡವಂತೆ ಮಾಡಿತ್ತು. ಈ ಕುರಿತಂತೆ ಮಾತನಾಡಿರುವ ಸೀತಾರಾಂ ಯೆಚೂರಿ ಅವರು, ಹೇಳಿಕೆ ತಪ್ಪಾಗಿ ಪ್ರಕಟವಾಗಿದ್ದರೆ, ರಾಜನಾಥ ಸಿಂಗ್ ಅವರು ಸಲೀಂ ಅವರಿಗೆ ಧನ್ಯವಾದ ಹೇಳಬೇಕು. ಕಾರಣ ಈ ಪ್ರಕಟಣೆಯೊಂದು ಹಲವು ವಾರದ ಹಿಂದೆ ಪ್ರಕಟಣೆಯಾಗಿದೆ. ಆದರೆ ಈ ಬಗ್ಗೆ ಯಾರೊಬ್ಬರಿಗೂ ಗಮನಕ್ಕೆ ಬಂದಿರಲಿಲ್ಲ. ನಾವು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಸರ್ಕಾರ ಹಾಗೂ ಸಂಸತ್ತು ಈ ಬಗ್ಗೆ ನಮಗೆ ಧನ್ಯವಾದ ಹೇಳಬೇಕಿದೆ ಎಂದು ಎಂದು ಹೇಳಿದ್ದಾರೆ.

'800 ವರ್ಷಗಳ ಬಳಿಕ ಮೊದಲ ಹಿಂದೂ ನಾಯಕರೊಬ್ಬರು ಪ್ರಧಾನಿಯಾಗಿದ್ದಾರೆಂದು ಗೃಹ ಸಚಿವರು ಹೇಳಿದ್ದಾರೆಂಬ ಲೇಖನವೊಂದನ್ನು ಔಟ್‌ಲುಕ್ ನಿಯತಕಾಲಿಕೆ ತನ್ನ ಆನ್ ಲೈನ್ ಆವೃತ್ತಿಯಲ್ಲಿ ಪ್ರಕಟಿಸಿತ್ತು.

ಈ ಲೇಖನವನ್ನು ಓದಿದ್ದ ಸಿಪಿಎಂ ನಾಯಕ  ಸಲೀಮ್ ಅವರು ನಿನ್ನೆಯಷ್ಟೇ ರಾಜನಾಥ ಸಿಂಗ್ ಅವರು ನಿಯತಕಾಲಿಕೆಯೊಂದಕ್ಕೆ 800 ವರ್ಷದ ಬಳಿಕ ಮೊದಲ ಹಿಂದೂ ನಾಯಕರೊಬ್ಬರು ದೇಶದ ಪ್ರಧಾನಿಯಾಗಿದ್ದಾರೆಂದು ಹೇಳಿದ್ದಾರೆಂದು ಆರೋಪಿಸಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ರಾಜನಾಥ್ ಸಿಂಗ್ ಅವರು ನಾನು ಈ ರೀತಿಯ ಹೇಳಿಕೆಯನ್ನು ನೀಡಿಯೇ ಇಲ್ಲ. ನೀಡಿದ್ದೇನೆಂದು ಹೇಳುತ್ತಿರುವ ಸಲೀಮ್ ಅವರು ದಾಖಲೆಯನ್ನೊದಗಿಸಲಿ. ಇಲ್ಲವೇ ಕ್ಷಮಾಯಾಚಿಸಲಿ ಎಂದು ಪಟ್ಟು ಹಿಡಿದಿದ್ದರು. ಸದನದಲ್ಲಿ ಗದ್ದಲವುಂಟಾದ ಕಾರಣ ಕಲಾಪವನ್ನು ಎರಡು ಬಾರಿ ಮುಂದೂಡಿತ್ತು.

ಹೀಗಾಗಿ ಪ್ರಕಟಣೆ ಕುರಿತಂತೆ ವಿಷಾದ ವ್ಯಕ್ತಪಡಿಸಿದ್ದ ಔಟ್ ಲುಕ್ ನಿಯತಕಾಲಿಕೆಯು ರಾಜನಾಥ ಸಿಂಗ್ ಅವರ ಬಳಿ ಕ್ಷಮೆಯಾಚಿಸಿತ್ತು. ಹೇಳಿಕೆ ಕುರಿತ ಮೂಲಗಳನ್ನು ಪರಿಶೀಲಿಸಲಾಗುತ್ತಿದ್ದು, ಗೃಹ ಸಚಿವರ ಅಥವಾ ಸಂಸತ್ತಿನ ಹೆಸರಿಗೆ ಹಾನಿಯುಂಟು ಮಾಡುವುದು ನಮ್ಮ ಉದ್ದೇಶವಾಗಿರಲಿಲ್ಲ. ಪ್ರಕಟಣೆಯಿಂದಾಗಿ ರಾಜನಾಥ್ ಸಿಂಗ್ ಅವರಿಗೆ ಉಂಟಾಗ ಅಪಮಾನಕ್ಕೆ ವಿಷಾದಿಸುತ್ತೇವೆ. ಶೀಘ್ರದಲ್ಲೇ ಹೇಳಿಕೆ ಕುರಿತ ಮೂಲಗಳನ್ನು ಪರಿಶೀಲಿಸಿ ಸರಿಪಡಿಸಲಾಗುವುದು ಎಂದು ಹೇಳಿತ್ತು.

SCROLL FOR NEXT