ದೇಶ

ಬೈಕ್ ಜತೆಗೆ 2 ವರ್ಷ ಉಚಿತ ಪೆಟ್ರೋಲ್: ಪ್ರಣಾಳಿಕೆಯಲ್ಲಿ ಬಿಜೆಪಿ ಘೋಷಣೆ

Vishwanath S
ಪಾಟ್ನ: ಬಿಹಾರ ವಿಧಾನಸಭೆ ಚುನಾವಣೆ ಕಾವು ದಿನೇ ದಿನೇ ತಾರಕಕ್ಕೇರುತ್ತಿದ್ದು, ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತನ್ನು ಮಾಡುತ್ತೀವೆ. 
ಬಿಹಾರದಲ್ಲಿ ನಿತೀಶ್ ಕುಮಾರ್ ಆಧಿಪತ್ಯವನ್ನು ಕೊನೆಗಾಣಿಸುವ ದಿಟ್ಟ ನಿರ್ಧಾರ ಕೈಗೊಂಡಿರುವ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ 5 ಸಾವಿರ ವಿದ್ಯಾರ್ಥಿನಿಯರಿಗೆ ಬೈಕ್ ಜತೆಗೆ ಎರಡು ವರ್ಷ ಉಚಿತ ಪೆಟ್ರೋಲ್ ನೀಡುವುದಾಗಿ ಘೋಷಣೆ ಮಾಡಿದೆ.
ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆ ಹೊಂದಿದ ಶ್ಲಾಘನೀಯ 5 ಸಾವಿರ ವಿದ್ಯಾರ್ಥಿನಿಯರಿಗೆ ಸ್ಕೂಟಿ(ದ್ವಿಚಕ್ರ ವಾಹನ ) ಜತೆ ಉಚಿತ ಪೆಟ್ರೋಲ್ ನೀಡುವ ಸೌಲಭ್ಯ ಕಲ್ಪಿಸಿಕೊಡುವ ಆಶ್ವಾಸನೆಯನ್ನು ಬಿಜೆಪಿ ಮುಖಂಡ ಸುಶೀಲ್ ಮೋದಿ ಹೇಳಿದ್ದಾರೆ. 
ಅಲ್ಲದೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಬಿಪಿಎಲ್ ಪಡಿತರ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಉಚಿತ ಎಲ್ಪಿಜಿ ಗ್ಯಾಸ್ ಅಳವಡಿಸುವ ಘೋಷಣೆಯನ್ನು ಮಾಡಿದೆ.
ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ನಿತೀಶ್ ಕುಮಾರ್ ಅವರ ಮೇಲಿರುವ 100 ಕೋಟಿ ರು. ಮೊತ್ತದ ಔಷಧ ಹಗರಣದ ತನಿಖೆಯನ್ನು ಸಿಬಿಐ ತನಿಖೆಗೆ ವಹಿಸಲಾಗುವುದು ಎಂದು ಸುಶೀಲ್ ಮೋದಿ ಹೇಳಿದ್ದಾರೆ.
SCROLL FOR NEXT