ಅಹಮದಾಬಾದ್: ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಪೊಲೀಸರನ್ನೇ ಹತ್ಯೆ ಮಾಡಿ! ಇದು ಪಟೇಲ್ ಸಮುದಾಯದ ಮೀಸಲಾತಿಗಾಗಿ ಹೋರಾಡುತ್ತಿರುವ ಹಾರ್ದಿಕ್ ಪಟೇಲ್ ನೀಡಿದ ವಿವಾದಾತ್ಮಕ ಕರೆ.
``ನಿಮಗೆ ಧೈರ್ಯ ಇದ್ದರೆ ಒಂದಷ್ಟು ಪೊಲೀಸರನ್ನು ಹತ್ಯೆ ಮಾಡಿ. ಪಟೇಲರು ಯಾವತ್ತೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ'' ಎಂದು ಅವರು ಹೇಳಿದ್ದಾರೆ. ಪಟೇಲ್ ಹೋರಾಟ ಬೆಂಬಲಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಘೋಷಿಸಿದ್ದ ಸೂರತ್‍ನ ಯುವಕ ವಿಪುಲ್ ದೇಸಾಯಿ ಮನೆಗೆ ಭೇಟಿ ನೀಡಿದ ವೇಳೆ ಅವರು, ``ನಾವು ಪಟೇ ಲರ ಪುತ್ರರು. ಆತ್ಮಹತ್ಮೆ ಕುರಿತು ಯೋಚಿಸಲೇಬಾರದು. ಅದರ ಬದಲು ಇಬ್ಬರು ಮೂವರು ಪೊಲೀಸರ ಹತ್ಯೆ ಮಾಡುವ ಧೈರ್ಯ ಪ್ರದರ್ಶಿಸಬೇಕು'' ಎಂದು ಸಲಹೆ ನೀಡಿದ್ದಾರೆ.