ಲಾಲು ಪ್ರಸಾದ್ ಯಾದವ-ನರೇಂದ್ರ ಮೋದಿ 
ದೇಶ

ಮೋದಿ ಕಲಿಯುಗದ ಧೃತರಾಷ್ಟ್ರ, ಬರೀ ಅಂಧನಲ್ಲ, ಕಿವುಡ, ಮೂಕನೂ ಕೂಡ: ಲಾಲು

ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಕೆಸರೆರಚಾಟ ಆರಂಭವಾಗಿದ್ದು, ಪ್ರಧಾನಿ...

ಬಿಹಾರ: ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಕೆಸರೆರಚಾಟ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ಧಾಳಿ ನಡೆಸಿರುವ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್, ಮೋದಿಯನ್ನು ಧೃತರಾಷ್ಟ್ರ ಎಂದು ಕರೆದಿದ್ದಾರೆ.
ನರೇಂದ್ರ ಮೋದಿ ಕಲಿಯುಗದ ಧೃತರಾಷ್ಟ್ರ. ಹಸ್ತೀನಾಪುರದಲ್ಲಿ ಕುಳಿತಿರುವ ಈ ಕಲಿಯುಗದ ಈ ಧೃತರಾಷ್ಟ್ರ ಕೇವಲ ಅಂಧನಲ್ಲ. ಜೊತೆಗೆ ಕಿವುಡ, ಮೂಕನು ಕೂಡ ಆಗಿದ್ದಾನೆ ಎಂದು ಲಾಲು ಟ್ವೀಟರ್ ನಲ್ಲಿ ಟೀಕಿಸಿದ್ದಾರೆ.
ತೋರಿಕೆಗೆ ಮಾತ್ರ ಕಿರುಚಾಡುವ ಕಲಿಯುಗ ಈ ಧೃತರಾಷ್ಟ್ರ ಒಳಗಿನಿಂದ ಭಯಪಡುವ ಪುಕ್ಲ. ಏನಾದರೂ ಹೇಳಬೇಕು ಎನ್ನುವ ಸಂದರ್ಭದಲ್ಲಿ ಮೌನವಾಗಿ ಕುಳಿತಿರುತ್ತಾರೆ ಎಂದು ಲಾಲು ಟ್ವೀಟ್ ಮಾಡಿದ್ದಾರೆ.
ಹೊರಗಿನಿಂದ ಬಂದವರು ಬಿಹಾರದಲ್ಲಿ ಆಡಳಿತ ನಡೆಸಲು ಹುನ್ನಾರ ನಡೆಸುತ್ತಿದ್ದಾರೆ. ಆದರೆ ಅದಕ್ಕೆ, ಬಿಹಾರದ ಜನತೆ ಹೊರಗಿನವರಿಗೆ ಆಡಳಿತ ನಡೆಸಲು ಬಿಡುವುದಿಲ್ಲ. ಗುಜರಾತಿನವರಿಂದ ಬಿಹಾರವನ್ನು ಹಾಳು ಮಾಡಲು ನಾವು ಬಿಡುವುದಿಲ್ಲ ಎಂದು ಲಾಲು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!