ಸಾಕ್ಷಿ ಮಹಾರಾಜ್ 
ದೇಶ

ಗೋ ರಕ್ಷಣೆಗಾಗಿ ಸಾಯಿಸಲು, ಸಾಯಲೂ ಸಿದ್ಧ: ಸಾಕ್ಷಿ ಮಹರಾಜ್

ದಾದ್ರಿ ದುರ್ಘಟನೆಯ ರಾಜಕೀಯ ಕಿಚ್ಚಿಗೆ ತುಪ್ಪ ಸುರಿದಿರುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರು, ಗೋವುಗಳ ರಕ್ಷಣೆಗಾಗಿ ಬೆರೆಯವರನ್ನು ಸಾಯಿಸಲು ಮತ್ತು...

ನವದೆಹಲಿ: ದಾದ್ರಿ ದುರ್ಘಟನೆಯ ರಾಜಕೀಯ ಕಿಚ್ಚಿಗೆ ತುಪ್ಪ ಸುರಿದಿರುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರು, ಗೋವುಗಳ ರಕ್ಷಣೆಗಾಗಿ ಬೆರೆಯವರನ್ನು ಸಾಯಿಸಲು ಮತ್ತು ತಾನೂ ಸಾಯಲು ಸಿದ್ಧ ಎಂದಿದ್ದಾರೆ.

'ನಮ್ಮ ತಾಯಿಗೆ ಆಗುವ ಅವಮಾನವನ್ನು ನಾವು ಸಹಿಸಿಕೊಳ್ಳುವುದಿಲ್ಲ. ಇದಕ್ಕಾಗಿ ನಾವು ಸಾಯಲು ಮತ್ತು ಸಾಯಿಸಲೂ ಸಿದ್ದ' ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ.

ದಾದ್ರಿ ಪ್ರಕರಣ ನಿರ್ವಹಣೆಯಲ್ಲಿ ಉತ್ತರ ಪ್ರದೇಶ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಸಾಕ್ಷಿ ಮಹಾರಾಜ್, ಈ ವಿಚಾರದಲ್ಲಿ ಸಮಾಜವಾದಿ ಪಕ್ಷ ದ್ವಂದ್ವ ನಿಲುವು ತಾಳಿದೆ ಎಂದಿದ್ದಾರೆ.

ಇಖ್ಲಾಕ್ ಕುಟುಂಬಕ್ಕೆ ಅಖಿಲೇಶ್ ಯಾದವ್ ಅವರು 45 ಲಕ್ಷ ರುಪಾಯಿ ಪರಿಹಾರ ಘೋಷಿಸಿರುವುದಕ್ಕೆ ನನ್ನ ವಿರೋಧ ಇಲ್ಲ. ಆದರೆ ಉನ್ನಾವೊದಲ್ಲಿ ಇಬ್ಬರು ಬಾಲಕಿಯರನ್ನು ರೇಪ್ ಮಾಡಿ ಹತ್ಯೆ ಮಾಡಿದ ಪ್ರಕರಣದಲ್ಲಿ ಅವರು ಯಾವುದೇ ಪರಿಹಾರ ನೀಡಿಲ್ಲ ಎಂದರು.

ಇದೇ ವೇಳೆ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ವಿರುದ್ಧವೂ ವಾಗ್ದಾಳಿ ನಡೆಸಿದ ಸಾಕ್ಷಿ ಮಹಾರಾಜ್, 'ಅಜಂ ಖಾನ್ ಒಬ್ಬ ಪಾಕಿಸ್ತಾನಿ. ಪಾಕ್ ರಾಜಕೀಯದಲ್ಲಿ ಅವರಿಗೆ ವಿಶ್ವಾಸವಿದೆ' ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!