ಆಧಾರ್ ಕಾರ್ಡ್ ವಿವಾದ: ಸಮಸ್ಯೆ ಬಗೆಹರಿಸಲು ಕಾಲಾವಕಾಶಬೇಕೆಂದ ಸುಪ್ರೀಂ
ಪಡಿತರ ಮತ್ತು ಅಡುಗೆ ಅನಿಲಕ್ಕೆ ಸಂಬಂಧಪಟ್ಟು ಮಾತ್ರವೇ ಆಧಾರ್ ಕಾರ್ಡ್ನ್ನು ಸೀಮಿತಗೊಳಿಸಬೇಕೆಂಬ ಈ ಮೊದಲಿನ ತೀರ್ಪನ್ನು ತಿದ್ದುಪಡಿ ಮಾಡಬೇಕೆಂದು ಕೋರಿರುವ ಕೇಂದ್ರ, ಸೆಬಿ ಹಾಗೂ ಆರ್ಬಿಐ ಮನವಿ ಸ್ವೀಕರಿಸಿರುವ ಸುಪ್ರೀಂ ಕೋರ್ಟ್...
ನವದೆಹಲಿ: ಪಡಿತರ ಮತ್ತು ಅಡುಗೆ ಅನಿಲಕ್ಕೆ ಸಂಬಂಧಪಟ್ಟು ಮಾತ್ರವೇ ಆಧಾರ್ ಕಾರ್ಡ್ನ್ನು ಸೀಮಿತಗೊಳಿಸಬೇಕೆಂಬ ಈ ಮೊದಲಿನ ತೀರ್ಪನ್ನು ತಿದ್ದುಪಡಿ ಮಾಡಬೇಕೆಂದು ಕೋರಿರುವ ಕೇಂದ್ರ, ಸೆಬಿ ಹಾಗೂ ಆರ್ಬಿಐ ಮನವಿ ಸ್ವೀಕರಿಸಿರುವ ಸುಪ್ರೀಂ ಕೋರ್ಟ್, ವಿವಾದ ಇತ್ಯರ್ಥಗೊಳಿಸುವ ಸಲುವಾಗಿ ಬೃಹತ್ ಪೀಠ ರಚಿಸುವ ಅಗತ್ಯವಿದ್ದು ಆದೇಶಕ್ಕಾಗಿ ಒಂದು ದಿನದ ಕಾಲಾವಕಾಶ ಬೇಕೇಂದು ಗುರುವಾರ ಹೇಳಿದೆ.
ಇಂದು ನಡೆದ ವಿಚಾರಣೆ ವೇಳೆ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ಕೇಂದ್ರ ಸರಕಾರ ಹಾಗೂ ಇನ್ನೂ ಮೂರು ಸರಕಾರಿ ಸಂಸ್ಥೆಗಳು ಮಾಡಿರುವ ಈ ಮನವಿಯನ್ನು ಸುಪ್ರೀಂ ಕೋರ್ಟ್ ಮುಂದೆ ಮಂಡಿಸಿದರು. ಇದಕ್ಕುತ್ತರಿಸಿದ ವರಿಷ್ಠ ನ್ಯಾಯಮೂರ್ತಿ ಎಚ್ ಎಲ್ ದತ್ತು ನೇತೃತ್ವದ ನ್ಯಾಯಪೀಠ, "ಈ ಬಗ್ಗೆ ನಮಗೆ ನಾಳೆ ಸಂಜೆಯವರೆಗಿನ ಅವಧಿಗೆ ಕಾಲಾವಕಾಶ ಅಗತ್ಯವಿದ್ದು, ಸಮಸ್ಯೆ ಬಗೆಹರಿಯುವಿಕೆಗೆ ಬೃಹತ್ ಪೀಠ ರಚನೆಯ ಅಗತ್ಯವಿದೆ. ಹೀಗಾಗಿ ನಾವು ಒಂಬತ್ತು ನ್ಯಾಯಮೂರ್ತಿಗಳನ್ನು ಕಲೆ ಹಾಕಬೇಕಾಗಿದೆ' ಎಂದು ಹೇಳಿದ್ದಾರೆ.
ನ್ಯಾಯಮೂರ್ತಿ ಎಚ್ ಎಲ್ ದತ್ತು ಅವರ ಈ ಪ್ರತಿಕ್ರಿಯೆಗೆ ಉತ್ತರಿಸಿದ ರೋಹಟಗಿ ಅವರು, ಆಧಾರ್ ಕಾರ್ಡ್ ಬಳಕೆ ವಿವಾದ ಕುರಿತಾಗಿ ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿರುವ ತೀರ್ಪಿನ ತಿದ್ದುಪಡಿಯ ಕೋರಿಕೆಗೆ ಕೆ ಕೆ ವೇಣುಗೋಪಾಲ್ ಮತ್ತು ಹರೀಶ್ ಸಾಳ್ವೆ ಸೇರಿದಂತೆ ಹಿರಿಯ ವಕೀಲರ ದಂಡೇ ಒಗ್ಗೂಡಿರುವುದರಿಂದ ಈ ವಿಷಯವು ತುರ್ತಾಗಿ ತೀರ್ಮಾನವಾಗಬೇಕಿದೆ ಎಂದು ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.