ಪಾಟ್ನ: ಗೋಮಾಂಸ ಸೇವನೆ ಶಂಕೆಯಿಂದಾಗಿ ಮುಸ್ಲಿಂ ವ್ಯಕ್ತಿಯನ್ನು ಹತ್ಯೆ ಮಾಡಿದ ಪ್ರಕರಣ ರಾಜಕೀಯ ನಾಯಕರ ನಡುವೆ ವಾಕ್ಸಮರವನ್ನುಂಟು ಮಾಡಿದ್ದು, ನಾಯಕರು ವಿರೋಧ ಪಕ್ಷದ ನಾಯಕರುಗಳ ನಡುವೆ ಕೆಸರೆರಚಾಟ ಪ್ರಾರಂಭವಾಗಿದೆ.
ಇತ್ತೀಚೆಗಷ್ಟೇ ಮೋದಿ ರ್ಯಾಲಿಯೊಂದರಲ್ಲಿ ಲಾಲೂ ಹಾಗೂ ನಿತೀಶ್ ಕುಮಾರ್ ವಿರುದ್ಧ ಕಿಡಿಕಾರಿದ್ದರು. ಇದೀಗ ಮೋದಿ ಅವರ ಹೇಳಿಕೆಗೆ ಮರು ಪ್ರತಿಕ್ರಿಯೆ ನೀಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ದಾದ್ರಿ ಪ್ರಕರಣ ಸಂಬಂಧ ಮೌನವನ್ನು ಮುಂದುವರೆಸಿಕೊಂಡು ಬಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಹಾರ ರಾಜ್ಯದಲ್ಲಿ ಇದೀಗ ಕೋಮು ಸೌಹಾರ್ದವನ್ನು ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಗುರುವಾರ ಹೇಳಿದ್ದಾರೆ.
ಮೋದಿ ಅವರು ಇದೀಗ ಅವರ ನಿಜರೂಪವನ್ನು ತೋರಿಸಿದ್ದು, ಬಿಹಾರ ಚುನಾವಣೆಗೆ ಕೋಮು ಬಣ್ಣ ನೀಡಲು ಮಾಡುತ್ತಿದ್ದಾರೆ. ಈ ಹಿಂದೆ ಪ್ರಧಾನಮಂತ್ರಿಯಾಗಿದ್ದ ವಾಜಪೇಯಿಯವರು ರಾಜಧರ್ಮವನ್ನು ಪಾಲಿಸುವಂತೆ ಸಾಕಷ್ಟು ಒತ್ತಡಗಳಿದ್ದವು, ವಾಜಪೇಯಿ ಸಹ ರಾಜಧರ್ಮವನ್ನು ಪಾಲಿಸಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ರಾಜಧರ್ಮವನ್ನು ಪಾಲಿಸುವವರು ಯಾರಿದ್ದಾರೆ ಎಂದು ಹೇಳಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆ ನಿಮಿತ್ತ ಇಂದು ಮುಂಗರ್ ನಲ್ಲಿ ನಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಲಾಲೂ ಪ್ರಸಾದ್ ಯಾದವ್ ಹಾಗೂ ನಿತೀಶ್ ಕುಮಾರ್ ವಿರುದ್ಧ ಕಿಡಿಕಾರಿದ್ದರು. ಹಿಂದೂಗಳು ಸಹ ಗೋಮಾಂಸ ತಿನ್ನುತ್ತಾರೆ ಎಂಬ ಲಾಲೂ ಅವರ ಹೇಳಿಕೆ ನಿಜಕ್ಕೂ ಯಧುವಂಶ ಸಮಾಜದ ಗೌರವಕ್ಕೆ ಧಕ್ಕೆಯನ್ನುಂಟು ಮಾಡಿದೆ. ಯಧುವಂಶ ಸಮಾಜದ ಆದರ್ಶ ಹಾಗೂ ರೀತಿ-ನೀತಿ, ಸಂಸ್ಕೃತಿಗಳು ಗುಜರಾತ್ ನಲ್ಲಿ ಶ್ವೇತ ಕ್ರಾಂತಿಯನ್ನೇ ಸೃಷ್ಟಿಸಿತ್ತು. ದೇವಧೂತ ಕೃಷ್ಣನ ಗೋವು ರಕ್ಷಣೆ ಕುರಿತಂತೆ ದೇಶದಲ್ಲಿ ಕ್ರಾಂತಿಯನ್ನು ಸೃಷ್ಟಿಸಿದ್ದವರು ಯಧುವಂಶದವರು. ಅಂತಹ ಸಮಾಜವನ್ನು ಇಂದು ಲಾಲೂ ಅಪಮಾನಕ್ಕೊಳಗಾಗುವಂತೆ ಮಾಡಿದ್ದಾರೆ ಎಂದು ಹೇಳಿದ್ದರು.