ದೇಶ

ಭಾರತೀಯ ಮಹಿಳೆಯ ಕೈ ಕತ್ತರಿಸಿದ ಕೃತ್ಯವನ್ನು ಒಪ್ಪಲು ಸಾಧ್ಯವಿಲ್ಲ: ಸುಷ್ಮಾ ಸ್ವರಾಜ್

Sumana Upadhyaya

ನವದೆಹಲಿ: ಸೌದಿ ಪ್ರಜೆಯೊಬ್ಬರ ಮನೆಯಲ್ಲಿ ಕೆಲಸಕ್ಕಿದ್ದ ತಮಿಳುನಾಡು ಮೂಲದ 56ರ ಹರೆಯದ ಭಾರತೀಯ ಮಹಿಳೆಯೊಬ್ಬಳ ಕೈ ಕತ್ತರಿಸಿದ ಸೌದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಘಟನೆ ಕುರಿತು ಸೌದಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.

ಈ ಪ್ರಕರಣ ನಮ್ಮ ಮನಸ್ಸನ್ನು ತೀವ್ರವಾಗಿ ಕದಡಿದೆ. ನಾವು ತೀವ್ರವಾಗಿ ಖಂಡಿಸುತ್ತೇವೆ. ಭಾರತೀಯ ರಾಯಭಾರ ಕಚೇರಿ ಅನ್ಯಾಯಕ್ಕೊಳಗಾಗಿರುವ ಮಹಿಳೆ ಕಸ್ತೂರಿ ಮುನಿರತ್ನಂ ಜೊತೆ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾರೆ.

ಸೌದಿ ಮಹಿಳೆ ಮಾಡಿರುವ ಕೃತ್ಯವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವೇ ಇಲ್ಲ. ಸೌದಿಯ ಮಹಿಳೆ ಮೇಲೆ ಕೊಲೆ ಪ್ರಯತ್ನ ಕೇಸು ದಾಖಲಿಸಲು ಒತ್ತಾಯಿಲಸುತ್ತೇವೆ ಎಂದರು.
ರಿಯಾದ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸೌದಿಯ ವಿದೇಶಾಂಗ ಸಚಿವಾಲಯದ ಜೊತೆ ಸಂಪರ್ಕಿಸಿ ಆರೋಪಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಒತ್ತಡ ಹೇರಲಾಗುವುದು. ಅಲ್ಲದೆ ಪ್ರಕರಣದ ಬಗ್ಗೆ ಸ್ವತಂತ್ರ ತನಿಖೆ ನಡೆಸಲು ಸಹ ಒತ್ತಾಯಿಸಲಾಗುವುದು ಎಂದರು.

ಇನ್ನೊಂದೆಡೆ ಘಟನೆ ಕುರಿತು ಮುಂಬೈಯಲ್ಲಿ  ಮಾತನಾಡಿರುವ ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ವಿ.ಕೆ.ಸಿಂಗ್, ಶೋಷಣೆ, ದೌರ್ಜನ್ಯಗಳಂತಹ ಪ್ರಕರಣಗಳು ನಡೆಯದಂತೆ ಜಾಗ್ರತೆ ವಹಿಸಲು ವಿದೇಶಗಳಿಗೆ ಕೆಲಸಕ್ಕೆ ಹೋಗುವವರು ಮಾನ್ಯತೆ ಪಡೆದ ಸಂಸ್ಥೆಗಳ ಮೂಲಕವೇ ಹೋಗಬೇಕು ಎಂದು ಸಲಹೆ ನೀಡಿದ್ದಾರೆ.
ವಿದೇಶಗಳಲ್ಲಿ ಕೆಲಸ ಕೊಡಿಸುತ್ತೇವೆ ಎಂದು ಹೇಳಿಕೊಂಡು ಮೋಸ ಮಾಡುವವರು ಬೇಕಾದಷ್ಟು ಜನರಿರುತ್ತಾರೆ. ಅಂತವರನ್ನು ನಂಬಿ ಮೋಸ ಹೋಗಬೇಡಿ. ಕಾನೂನುಬದ್ಧ ಏಜೆಂಟ್ ಗಳ ಮೂಲಕವೇ ಹೋಗಿ ಎಂದು ಹೇಳಿದ್ದಾರೆ.

ವಿದೇಶಕ್ಕೆ ಕೆಲಸಕ್ಕೆ ಹೋಗುವ ಮೊದಲು ಅಲ್ಲಿನ ಮಾಹಿತಿ, ಕೆಲಸದ ಕಾನೂನುಗಳನ್ನು ತಿಳಿದುಕೊಂಡೇ ಹೋಗಿ, ಇಲ್ಲದಿದ್ದರೆ ಅನ್ಯಾಯಕ್ಕೊಳಗಾಗಬಹುದು ಎಂದು ಹೇಳಿದ್ದಾರೆ.

SCROLL FOR NEXT