ಮುಲಾಯಂ ಸಿಂಗ್ ಯಾದವ್ 
ದೇಶ

ನಮ್ಮ ಸರ್ಕಾರ ಬಿದ್ದರೂ ಪರ್ವಾಗಿಲ್ಲ, ಕ್ರಮಕ್ಕೆ ಬದ್ಧ

``ಮುಜಾಫರ್ ನಗರ ಗಲಭೆಯ ಹಿಂದೆ ಯಾರಿದ್ದರೋ, ದಾದ್ರಿ ಘಟನೆಯ ಹಿಂದೆಯೂ ಅವರದ್ದೇ ಕೈವಾಡವಿದೆ.ನಿರ್ದಿಷ್ಟ...

ಲಖನೌ: ``ಮುಜಾಫರ್ ನಗರ ಗಲಭೆಯ ಹಿಂದೆ ಯಾರಿದ್ದರೋ, ದಾದ್ರಿ ಘಟನೆಯ ಹಿಂದೆಯೂ ಅವರದ್ದೇ ಕೈವಾಡವಿದೆ. ನಿರ್ದಿಷ್ಟ ಪಕ್ಷವೊಂದರ ಮೂವರು ವ್ಯಕ್ತಿಗಳೇ ಕೃತ್ಯದ ಸಂಚು ರೂಪಿಸಿದ್ದರು. ನಮ್ಮ ಸರ್ಕಾರ ಬಿದ್ದರೂ ಪರವಾಗಿಲ್ಲ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡೇ ತೀರುತ್ತೇವೆ.''

ಇದು ದಾದ್ರಿಯಲ್ಲಿ ನಡೆದ ಇಖ್ಲಾಕ್ ಹತ್ಯೆಗೆ ಸಂಬಂಧಿಸಿ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಅವರು ಮಾಡಿರುವ ಶಪಥ. ಗುರುವಾರ ಲಖನೌ ನಲ್ಲಿ ಮಾತನಾಡಿದ ಅವರು, ಉತ್ತರಪ್ರದೇಶದ ವಿದ್ಯಾವಂತ ಯುವಕರನ್ನು ಕೋಮುಶಕ್ತಿಗಳು ತಪ್ಪುದಾರಿಗೆ  ಳೆಯುತ್ತಿವೆ. ಸೌಹಾರ್ದತೆ ಬಯಸುವ ನಮಗೆ, ದಾದ್ರಿಯಂಥ ಘಟನೆಗಳಿಂದ ಬಹಳ ನೋವಾಗಿದೆ. ಘಟನೆಗೆ ಸಂಬಂಧಿಸಿ ಸದ್ಯದಲ್ಲೇ ಪ್ರಧಾನಿಯವರನ್ನು ಭೇಟಿಯಾಗುತ್ತೇನೆ.`ನೀವು ನಿಮ್ಮ ಸಬ್ಕಾ ಸಾಥ್, ಸಬ್ಕಾ ವಿಕಾಸ್ ಸ್ಲೋಗನ್‍ನತ್ತ ಒಮ್ಮೆ ಗಮನಹರಿಸಿ' ಎಂದು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.

ಇಬ್ಬರ ಬಂಧನ: ದಾದ್ರಿ ಘಟನೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳ ನ್ನು ಹಬ್ಬುತ್ತಿದ್ದ ಇಬ್ಬರನ್ನು ಉತ್ತರಪ್ರದೇಶ ಪೊಲೀಸರು ಗುರುವಾರ ಬಂಧಿಸಿದ್ದಾರೆ.ಗಾಳಿಸುದ್ದಿ ಹಬ್ಬುತ್ತಿರುವವರ ಮೇಲೆ ಸೈಬರ್ ಘಟಕವು ಕಣ್ಣಿಟ್ಟಿದೆ. ಕೋಮು ಸೌಹಾರ್ದತೆಗೆ ಧಕ್ಕೆ ತರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎನ್.ಪಿ.ಸಿಂಗ್ ತಿಳಿಸಿದ್ದಾರೆ.

ಇದೇ ವೇಳೆ, ಮೃತ ಇಖ್ಲಾಕ್ ಅವರ ಕುಟುಂಬವು ದಾದ್ರಿ ಬಿಟ್ಟು ದೆಹಲಿಗೆ ತೆರಳಿದೆ ಎಂಬ ವರದಿಯನ್ನು ಸ್ವತಃ ಇಖ್ಲಾಕ್ ಪುತ್ರ ತಳ್ಳಿಹಾಕಿದ್ದಾರೆ. ಇದು ಸುಳ್ಳು ಸುದ್ದಿ. ನಾವು ಸದ್ಯಕ್ಕೆ ಎಲ್ಲೂ ಹೋಗಲ್ಲ. ಇದು ನಮ್ಮ ತಾಯಿನಾಡು. ನಾವೆಲ್ಲರೂ ಇಲ್ಲೇ ಹುಟ್ಟಿ ದ್ದೇವೆ, ಇಲ್ಲೇ ಸಾಯುತ್ತೇವೆ. ನಾವೇಕೆ ಈ ಊರನ್ನು ಬಿಟ್ಟು ಹೋಗಬೇಕು ಎಂದು ಸರ್ತಾಜ್ ಪ್ರಶ್ನಿಸಿದ್ದಾರೆ. ದಾಗ್ರಿ ಜಿಲ್ಲಾಧಿಕಾರಿಯೂ ಮಾಧ್ಯಮಗಳಲ್ಲಿ ಬಂದ ವರದಿ ಸುಳ್ಳು ಎಂದಿದ್ದಾರೆ.

ಗೋಹತ್ಯೆ ನಿಷೇಧ ಜಾರಿಯಾಗಲಿ: ಪಿಎಂಒ
ದೇಶಾದ್ಯಂತ ಬೀಫ್ ರಾಜಕೀಯ ಸುದ್ದಿ ಮಾಡಿರುವ ನಡುವೆಯೇ `ಎಲ್ಲ ರಾಜ್ಯಗಳಲ್ಲೂ ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಲಿ ಎಂದು ಸೂಚಿಸಿರುವ ಟಿಪ್ಪಣಿಯೊಂದನ್ನು ಪ್ರಧಾನಿ ಕಾರ್ಯಾಲಯವು ಕಳುಹಿಸಿದೆ. ಪ್ರಧಾನಿ ಮೋದಿ ಅವರ ಗುಜರಾತ್ ನಲ್ಲಿ ಈ ಕಾನೂನು ಜಾರಿಯಾಗಿದೆ. ಇದನ್ನೇ ಮಾದರಿಯಾಗಿಟ್ಟುಕೊಂ0ಡು ಎಲ್ಲ ರಾಜ್ಯಗಳಲ್ಲೂ ಕಾನೂನು ಜಾರಿಯಾಗಲಿ ಎಂದೂ ಅದರಲ್ಲಿ ತಿಳಿಸಲಾಗಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.

ಮೋದಿ ಅವರು ಬಡತನದ ವಿರುದ್ಧ ಹೋರಾಡಬೇಕು ಎನ್ನುವ ಮೂಲಕ ನೈಜ ವಿಚಾರವನ್ನೇ ಮರೆಗೆ ಸರಿಸಿದ್ದಾರೆ. ದಾದ್ರಿ ಘಟನೆಯ ನ್ನಾಗಲೀ, ಕೋಮು ವಿಷ ಬಿತ್ತುತ್ತಿರುವ ಬಿಜೆಪಿ ನಾಯಕರನ್ನಾಗಲೀ ಅವರು ಖಂಡಿಸಲಿಲ್ಲ.
●ಆರ್ ಪಿ ಎನ್ ಸಿಂಗ್, ಕಾಂಗ್ರೆಸ್ ವಕ್ತಾರ

ದ್ವೇಷಪೂರಿತ ಹೇಳಿಕೆಗಳು, ಭಯ ಹುಟ್ಟಿಸುವ ಮಾತು ಗಳು ಮೊದಲು ನಿಲ್ಲಲಿ. ಕೆಲವು ವ್ಯಕ್ತಿಗಳ ಅಧಿಕಾರದ ಹಸಿವನ್ನು ನೀಗಿಸಲು ಧರ್ಮಗಳನ್ನು ಮುಖವಾಡದಂತೆ ಬಳಸುವ ಪ್ರವೃತ್ತಿಗೆ ನಾವು ಅವಕಾಶ ನೀಡಬಾರದು.
●ಪ್ರಣಬ್ ಮುಖರ್ಜಿ, ರಾಷ್ಟ್ರಪತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!