ಇಂದ್ರಾಣಿ ಮುಖರ್ಜಿ 
ದೇಶ

ಶೀನಾ ಬೋರಾ ಹತ್ಯೆ ಪ್ರಕರಣ: ಇಂದ್ರಾಣಿ ಮುಖರ್ಜಿ ದೇಹದಲ್ಲಿ ಕೊಕೇನ್ ಪತ್ತೆ

ಇಂದ್ರಾಣಿ ಮುಖರ್ಜಿಯ ಮೂತ್ರದ ಮಾದರಿಯ ಪರೀಕ್ಷೆಯಲ್ಲಿ ಕೊಕೇನ್, ಆಫೀಮಿನಂಥ ಮಾದಕ ದ್ರವ್ಯಗಳ ಕುರುಹು ಪತ್ತೆಯಾಗಿದೆ ಎಂದು ಆಸ್ಪತ್ರೆಯ ವರದಿ ತಿಳಿಸಿದೆ. ...

ಮುಂಬಯಿ:  ಶೀನಾ ಬೋರಾ ಕೊಲೆ ಪ್ರಕರಣದ ರಹಸ್ಯ ಬಹಿರಂಗವಾದ ಮೇಲೂ ನಿಗೂಢ ಸಂಗತಿಗಳ ಬಯಲಾಗುವಿಕೆ ಮುಂದುವರಿದಿದೆ. ಇಂದ್ರಾಣಿ ಮುಖರ್ಜಿಯ ಮೂತ್ರದ ಮಾದರಿಯ ಪರೀಕ್ಷೆಯಲ್ಲಿ ಕೊಕೇನ್, ಆಫೀಮಿನಂಥ ಮಾದಕ ದ್ರವ್ಯಗಳ ಕುರುಹು ಪತ್ತೆಯಾಗಿದೆ ಎಂದು ಆಸ್ಪತ್ರೆಯ ವರದಿ ತಿಳಿಸಿದೆ.

ಪ್ರಜ್ಞೆ ಕಳೆದುಕೊಂಡು ಕೋಮಾ ಸ್ಥಿತಿಗೆ ತಲುಪಿದ್ದ ಇಂದ್ರಾಣಿ ಮುಖರ್ಜಿಯನ್ನು ಸರ್ಕಾರದ ಅಧೀನದಲ್ಲಿರುವ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗಳು ಶೀನಾ ಬೋರಾ ಕೊಲೆ ಆರೋಪದ ಮೇಲೆ ಜೈಲಲ್ಲಿರುವ ಇಂದ್ರಾಣಿ ಅನಾರೋಗ್ಯ ನಾನಾ ಊಹಾಪೋಹಗಳಿಗೆ ಕಾರಣವಾಗಿತ್ತು.

ಬಳಿಕ ಆಕೆ ಗುಣಮಖರಾಗಿದ್ದು, ಅಕ್ಟೋಬರ್‌ 6ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮತ್ತೆ ಜೈಲು ಸೇರಿದ್ದರು. ಇಂದ್ರಾಣಿ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನುವ ಊಹಾಪೋಹ ಹರಡಿದ್ದ ಹಿನ್ನೆಲೆಯಲ್ಲಿ ಜೆಜೆ ಆಸ್ಪತ್ರೆ ಅಧಿಕಾರಿಗಳು ಆಕೆಯ ಮೂತ್ರದ ಮಾದರಿಯನ್ನು ಪರೀಕ್ಷೆಗಾಗಿ ಪ್ರಮುಖ ಖಾಸಗಿ ಆಸ್ಪತ್ರೆ ಪರೀಕ್ಷಾಲಯಕ್ಕೆ ಕಳುಹಿಸಿಕೊಟ್ಟಿದ್ದರು.

ಇಂದ್ರಾಣಿ ಮುಖರ್ಜಿ ಅವರ ಹಠಾತ್ ಅನಾರೋಗ್ಯ ಅನೇಕರ ಹುಬ್ಬೇರಿಸಿತ್ತು. ನಂತರದ ವೈದ್ಯಕೀಯ ಸಂಶೋಧನೆಗಳು ಉನ್ನತ ಮಟ್ಟದ ತನಿಖೆಗೆ ರಾಜ್ಯ ಸರ್ಕಾರ ಪ್ರೇರೇಪಣೆ ನೀಡಿದೆ. ಖಾಸಗಿ ಆಸ್ಪತ್ರೆಯಲ್ಲಿ ಹಲವು ನಿರ್ದಿಷ್ಟ ಪರೀಕ್ಷೆಗಳನ್ನು ನಡೆಸಲಾಗಿದ್ದು, ಆಕೆಯ ದೇಹದಲ್ಲಿ ಕೊಕೇನ್, ಆಫೀಮಿನಂಥ ಮಾದಕ ದ್ರವ್ಯಗಳ ಕುರುಹು ಇರುವ ಬಗ್ಗೆ ಮಾಹಿತಿ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!