ದೇಶ

ನೋಕಿಯಾಗೆ ಐಟಿ ಇಲಾಖೆ ನೋಟಿಸ್

Vishwanath S
ನವದೆಹಲಿ: ಮೊಬೈಲ್ ತಯಾರಿಕಾ ಕಂಪನಿ ನೋಕಿಯಾ ಇಂಡಿಯಾಗೆ ಆದಾಯ ತೆರಿಗೆ ಇಲಾಖೆ ಹೊಸ ತೆರಿಗೆ ನೋಟಿಸ್ ಜಾರಿ ಮಾಡಿದೆ. 
ಆದರೆ ಈ ನೋಟಿಸ್‍ನಲ್ಲಿ ಎಷ್ಟು ತೆರಿಗೆ ಪಾವತಿಸಬೇಕೆಂಬುದು ಅಥವಾ ಕೈಗೊಳ್ಳುವ ಕ್ರಮಗಳ ಕುರಿತು ಪ್ರಸ್ತಾಪಿಸಿಲ್ಲ ಎಂದು ಇಲಾಖೆ ಹೇಳಿದೆ. 2006ರಲ್ಲಿ ವಿಥಲ್ಡಿಂಗ್ ತೆರಿಗೆ (ವಿದೇಶಿ ಕಂಪನಿಗಳು ಭಾರತದಲ್ಲಿ ನಡೆಸುವ ವಹಿವಾಟಿನಿಂದ ಗಳಿಸುವ ಲಾಭವನ್ನು ಮಾತೃಕಂಪನಿಗೆ ವರ್ಗಾಯಿಸುವುದಕ್ಕೆ ವಿಧಿಸುವ ತೆರಿಗೆ) ನಿಯಮಗಳನ್ನು ಉಲ್ಲಂಘಿಸಿದ್ದು ರು. 2,000 ಕೋಟಿ ಪಾವತಿಯಬೇಕೆಂದು ಐಟಿ ಇಲಾಖೆ ನೋಟಿಸ್ ಜಾರಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಕಂಪನಿ ಭಾರತೀಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ಮೊರೆ ಹೋಗಿದೆ. 
ಭಾರತ ಮತ್ತು ಫಿನ್ ಲೆಂಡ್ ನಡುವಿನ ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲೂ ಈ ವಿಷಯ ಪ್ರಸ್ತಾಪವಾಗಿದೆ. ಮೈಕ್ರೋಸಾಫ್ಟ್ ನ ಮೊಬೈಲ್ ವಹಿವಾಟನ್ನು ಮೈಕ್ರೋಸಾಫ್ಟ್ ಕಂಪವಿ ಈಗಾಗಲೆ ಖರೀದಿಸಿದೆ. ಆದರೆ ಚೆನ್ನೈ ಬಳಿ ಇರುವ ಕಂಪನಿಯ ತಯಾರಿಕಾ ಘಟಕ ಈ ಡೀಲ್ ಗೆ ಸೇರಿಲ್ಲ. 
SCROLL FOR NEXT