ಮುಂಬೈ: ಇಂದ್ರಾಣಿ ಮುಖರ್ಜಿ ದಿಢೀರ್ ಅಸ್ವಸ್ಥತೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಆಕೆಯ ಮೂತ್ರದ ಮಾದರಿಯಲ್ಲಿ ಕೊಕೇನ್‍ನ ಅಂಶಗಳು ಪತ್ತೆಯಾಗಿವೆ.
ಸಿಬಿಐ ಬೈಕುಲ್ಲಾ ಜೈಲಿಗೆ ಶನಿವಾರ ಭೇಟಿ ನೀಡಿ ಇಂದ್ರಾಣಿಯನ್ನು ಸತತ 6 ಗಂಟೆ ಪ್ರಶ್ನಿಸಿತು. ನಂತರ, ಇಂದ್ರಾಣಿ ಅಸ್ವಸ್ಥ ಗೊಂಡದ್ದು ಔಷಧ ಸೇವನೆ ಅಥವಾ ಆತ್ಮ ಹತ್ಯೆ ಯತ್ನದಿಂದಲ್ಲ, ಅತಿಯಾದ ಬಳಲಿಕೆ ಯಿಂದ ಎಂದು ಜೈಲು ಐಜಿಪಿ ತಿಳಿಸಿದರು.
ಆದರೆ, ವೈದ್ಯಕೀಯ ತಪಾಸಣೆಯ 9 ಪುಟಗಳ ವರದಿ ಆಕೆಯ ಮೂತ್ರದಲ್ಲಿ ಕೊಕೇನ್‍ನ ಅಂಶವಿದ್ದುದಾಗಿ ತಿಳಿಸಿದೆ.