ಚಾಕು 
ದೇಶ

5 ವರ್ಷದ ಮಗನ ಕತ್ತು ಸೀಳಿ ತಾನು ಆತ್ಮಹತ್ಯೆ ಮಾಡಿಕೊಂಡ ತಾಯಿ

ತಾಯಿಗಿಂತ ಮಿಗಿಲಾದ ದೇವರಿಲ್ಲ ಎಂಬ ಮಾತಿದೆ. ಇದಕ್ಕೆ ಅಪವಾದವೆಂಬಂತೆ ಪುಣೆಯಲ್ಲಿ ತಾಯಿಯೊಬ್ಬಳು ತನ್ನ ಐದು ವರ್ಷದ ಮಗನ ಕತ್ತು...

ಪುಣೆ: ತಾಯಿಗಿಂತ ಮಿಗಿಲಾದ ದೇವರಿಲ್ಲ ಎಂಬ ಮಾತಿದೆ. ಇದಕ್ಕೆ ಅಪವಾದವೆಂಬಂತೆ ಪುಣೆಯಲ್ಲಿ ತಾಯಿಯೊಬ್ಬಳು ತನ್ನ ಐದು ವರ್ಷದ ಮಗನ ಕತ್ತು ಸೀಳಿ ಕೊಂದಿರುವ ದಾರುಣ ಘಟನೆ ನಡೆದಿದೆ.

ವತ್ತಿಯಲ್ಲಿ ಉಪಕರಣ ಇಂಜಿನಿಯರ್ ಆಗಿರುವ 34 ವರ್ಷದ ದೀಪ್ತಿ ಮೊರೆ ಅವರು ಪುಣೆಯ ಐಷಾರಾಮಿ ಪ್ರದೇಶದಲ್ಲಿ ಪತಿ ತೇಜಸ್ ಹಾಗೂ ಮಗ ಅರ್ನಾವ್ ಜತೆ ವಾಸವಾಗಿದ್ದರು. ಶನಿವಾರ ರಾತ್ರಿ ದೀಪ್ತಿ ಅರ್ನಾವ್ ನನ್ನ ತನ್ನ ಕೊನೆಗೆ ಕರೆದುಕೊಂಡು ಹೋಗಿ ಚಾಕುವಿನಿಂದ ಮಗ ಕತ್ತು ಸೀಳಿ ಕೊಲೆ ಮಾಡಿ ಬಳಿಕ ಗಂಡನಿಗೆ ವಿಷಯ ತಿಳಿಸಿದ ದೀಪ್ತಿ ಮೂರು ಹಂತಸ್ಥಿನ ಅಪಾರ್ಟ್ಮೆಂಟ್ ನ ಬಾಲ್ಕನಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶನಿವಾರ ರಾತ್ರಿ 2 ಗಂಟೆ ಸುಮಾರಿಗೆ ಮಗನನ್ನು ಹತ್ಯೆ ಮಾಡಿದ ಬಳಿಕ ದೀಪ್ತಿ ಭಾನುವಾರ ಬೆಳಗ್ಗೆ ವಿಷಯವನ್ನು ಪಕ್ಕದ ಕೋನೆಯಲ್ಲಿ ಮಲಗಿದ್ದ ಗಂಡನಿಗೆ ತಿಳಿಸಿದ್ದಾಳೆ. ಮಗನನ್ನು ಕಾಣಲು ತೇಜಸ್ ಹೊರ ಬಂದಿದ್ದು, ಈ ವೇಳೆ ಕೋಣೆ ಬಾಗಿಲು ಮುಚ್ಚಿಕೊಂಡ ದೀಪ್ತಿ ಮೂರು ಅಂತಸ್ತಿನ ಕಟ್ಟದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಡಲೇ ತೇಜಸ್ ಕಟ್ಟದದ ಅರ್ಪಾರ್ಟ್ ಮೆಂಟ್ ನ ಹಲಾರಾಂ ಗಂಟೆ ಬಾರಿಸಿದ್ದು, ನೆರೆಹೊರೆಯವರು ಬಂದು ಬಾಗಿಲು ತೆಗೆದಿದ್ದಾರೆ. ನಂತರ ಕೆಳಗೆ ಬಿದ್ದಿದ್ದ ದೀಪ್ತಿಯನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು ಅಷ್ಟರಲ್ಲೇ ಆಕೆ ಮೃತಪಟ್ಟಿದ್ದಾಳೆ. ಪುಣೆಯ ಸಿನ್ಹಾಗಡ್ ಪೊಲೀಸರು ಪ್ರಕರಣವನ್ನು ಆಕಸ್ಮಿಕ ಸಾವು ಎಂದು ಕೇಸು ದಾಖಲಿಸಿಕೊಂಡಿದ್ದಾರೆ.

ಆತ್ಮಹತ್ಯೆ ಪತ್ರ
ಆತ್ಮಹತ್ಯೆಗೂ ಮುನ್ನ ದೀಪ್ತಿ ಮೊರೆ ಅವರು ಮರಾಠಿ ಭಾಷೆಯಲ್ಲಿ ಎರಡು ಪುಟಗಳ ಡೇಟ್ ನೋಟ್ ಬರೆದಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಡಿಸಿಪಿ ಡಾ. ಸುಧಾಕರ್ ಪತ್ರೆ ಹೇಳಿದ್ದಾರೆ. ಕೈಬರಹ ಆಕೆಯದಾಗಿದ್ದಾಗಿ ತಿಳಿದುಬಂದಿದ್ದು, ಪತ್ರದಲ್ಲಿ ಆಕೆ ಜೀವನ ಕುರಿತಂತೆ ಬೆಟ್ಟದಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದು ಅವು ಕೈಗೂಡದೇ ಹೋದ ಕಾರಣದಿಂದ ಮಗನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದಿದ್ದಾರೆ.



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ