ದೇಶ

ಸುಧೀಂದ್ರ ಕುಲಕರ್ಣಿಯನ್ನು ಕಸಬ್‌ಗೆ ಹೋಲಿಸಿದ ಶಿವಸೇನೆ

Lingaraj Badiger

ಮುಂಬೈ: ಪಾಕಿಸ್ತಾನ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮಹಮ್ಮದ್ ಕಸೂರಿ ಪುಸ್ತಕ ಬಿಡುಗಡೆ ವಿರೋಧಿಸಿ ಕಾರ್ಯಕ್ರಮ ಆಯೋಜಕ, ಮಾಜಿ ಉಪ ಪ್ರಧಾನಿ ಎಲ್.ಕೆ.ಆಡ್ವಾಣಿ ಅವರ ಆಪ್ತ ಸುಧೀಂದ್ರ ಕುಲಕರ್ಣಿ ಅವರ ಮುಖಕ್ಕೆ ಸೋಮವಾರ ಮಸಿ ಬಳೆದಿದ್ದ ಶಿವಸೇನೆ, ಇದೀಗ ಅವರನ್ನು ಅಜ್ಮಲ್ ಕಸಬ್ ಹೋಲಿಸಿದೆ.

ಶಿವಸೇನೆ ಮುಖವಾಣಿ ಸಾಮ್ನಾನದಲ್ಲಿ ಕುಲಕರ್ಣಿಯನ್ನು ತೀವ್ರವಾಗಿ ಖಂಡಿಸಿಲಾಗಿದೆ. ಸುಧೀಂದ್ರ ಕುಲಕರ್ಣಿ ಪಾಕಿಸ್ತಾನಿ ಏಜೆಂಟ್ ಎಂದಿರುವ ಸೇನೆ, ಕುಲಕರ್ಣಿಯಂತಹ ಜನ ಭಾರತದಲ್ಲೇ ಇರಬೇಕಾದರೆ, ಪಾಕಿಸ್ತಾನ ಅಜ್ಮಲ್ ಕಸಬ್‌ನಂತವರನ್ನು ಭಾರತಕ್ಕೆ ಕಳುಹಿಸುವ ಅಗತ್ಯ ಇಲ್ಲ ಎಂದಿದೆ.

ಇದೇ ವೇಳೆ ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿರುವ ಶಿವಸೇನೆ, ಮತಕ್ಕಾಗಿ ಲಂಚ ಹಗರಣದಲ್ಲಿ ಸುಧೀಂದ್ರ ಕುಲಕರ್ಣಿಯವರ ಕೈವಾಡ ಇತ್ತು ಎಂದು ಹೇಳಿದೆ.

ಕಸೂರಿಗೆ ರೆಡ್ ಕಾರ್ಪೆಟ್ ಸ್ವಾಗತ ನೀಡಿದ ಸುಧೀಂದ್ರ ಕುಲಕರ್ಣಿ ಇದೊಂದು ಉತ್ತಮ ಪಾಠ ಮತ್ತು ಪಾಕಿಸ್ತಾನಿ ಕಲಾವಿದರು ಹಾಗೂ ಗಣ್ಯರ ವಿರುದ್ಧದ ಬಹಿಷ್ಕಾರ ಮುಂದುವರೆಯಲಿದೆ ಎಂದು ಸೇನೆ ಹೇಳಿದೆ.

SCROLL FOR NEXT