ಬಂದ್ ಹಿನ್ನೆಲೆಯಲ್ಲಿ ಮುಚ್ಚಿದ್ದ ಔಷಧ ಅಂಗಡಿಗಳು 
ದೇಶ

ದೇಶವ್ಯಾಪಿ ಅನಿರ್ದಿಷ್ಟಾವಧಿ ಬಂದ್‌: ಔಷಧ ಮಳಿಗೆಗಳು ಎಚ್ಚರಿಕೆ

ಆನ್‌ಲೈನ್‌ ನಲ್ಲಿ ಔಷಧ ಮಾರಾಟವನ್ನು ಕ್ರಮಬದ್ಧಗೊಳಿಸುವ ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸಿ ಬುಧವಾರ ದೇಶಾದ್ಯಂತ ಔಷಧ ವ್ಯಾಪಾರ...

ನವದೆಹಲಿ: ಆನ್‌ಲೈನ್‌ ನಲ್ಲಿ ಔಷಧ ಮಾರಾಟವನ್ನು ಕ್ರಮಬದ್ಧಗೊಳಿಸುವ ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸಿ  ಬುಧವಾರ ದೇಶಾದ್ಯಂತ ಔಷಧ ವ್ಯಾಪಾರ ಸಂಘಟನೆಗಳು ಕರೆ ನೀಡಿದ್ದ ಬಂದ್ ಯಶಸ್ವಿಯಾಗಿದೆ. ಸುಮಾರು ಎಂಟು ಲಕ್ಷ ಸದಸ್ಯರು ತಮ್ಮ ವಹಿವಾಟುಗಳನ್ನು ಮುಚ್ಚಿ ಬಂದ್‌ ಗೆ ಬೆಂಬಲ ನೀಡಿದ್ದರು.

ದೇಶಾದ್ಯಂತ ತಮ್ಮ ಔಷಧಿ ಅಂಗಡಿಗಳನ್ನು ಮುಚ್ಚಿ ಬಂದ್‌ ಯಶಸ್ವಿಗೊಳಿಸಿದ್ದಾರೆ ಎಂದು ಸಂಘಟನೆಯ ಅಧ್ಯಕ್ಷ ಜೆ ಎಸ್‌ ಶಿಂಧೆ ಹೇಳಿದರು. "ನಮ್ಮ ಸಂಘಟನೆಯ ಶೇ.90ರಷ್ಟು ಸದಸ್ಯರು ಇಂದು ತಮ್ಮ ಔಷಧಿ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆ ನಡೆಸಿದ್ದಾರೆ. ಉಳಿದ ಶೇ.10 ಸದಸ್ಯರು ತುರ್ತು ಸ್ಥಿತಿಯಲ್ಲಿರುವ ರೋಗಿಗಳ ನೆರವಿಗಾಗಿ ತಮ್ಮ ಅಂಗಡಿಯನ್ನು ಮಾನವೀಯ ನೆಲೆಯಲ್ಲಿ ತೆರೆದಿಟ್ಟಿದ್ದರು' ಎಂದು ಶಿಂಧೆ ಹೇಳಿದ್ದಾರೆ.

ಕೇಂದ್ರ ಸರಕಾರ ಇನ್ನೊಂದು ವಾರದೊಳಗೆ ಔಷಧಿ ವ್ಯಾಪಾರಸ್ಥರ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಅನಿರ್ದಿಷ್ಟಾವಧಿ ಬಂದ್‌ ಮುಷ್ಕರ ನಡೆಸಲಾಗುವುದು ಎಂಬ ಎಚ್ಚರಿಕೆಯನ್ನು ಶಿಂಧೆ ಈ ಸಂದರ್ಭದಲ್ಲಿ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT