ದೇಶ

ದೋಡಾ ಎನ್‌ಕೌಂಟರ್: ಇಬ್ಬರು ಉಗ್ರರ ಹತ್ಯೆ

Lingaraj Badiger

ಜಮ್ಮು: ಕಳೆದ ತಿಂಗಳು ಪೊಲೀಸ್ ಇಲಾಖೆ ತೊರೆದು ಉಗ್ರ ಸಂಘಟನೆ ಸೇರಿದ್ದ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು ಬುಧವಾರ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸೇನಾಪಡೆ ಹತ್ಯೆ ಮಾಡಿದೆ.

ನಾಲ್ಕು ವರ್ಷಗಳ ನಂತರ ಇದೇ ಮೊದಲ ಬಾರಿಗೆ ದೋಡಾ ಜಿಲ್ಲೆಯಲ್ಲಿ ಇಂದು ಎನ್‌ಕೌಂಟರ್ ನಡೆದಿದೆ. ಇದು ಹೆಚ್ಚುಕಮ್ಮಿ ಉಗ್ರ ಮುಕ್ತ ಪ್ರದೇಶ ಅಂತನಾ ಹೇಳಬಹುದು.

ಖಚಿತ ಮಾಹಿತಿ ಆಧರಿಸಿ ನಿನ್ನೆ ಮಧ್ಯರಾತ್ರಿ ಕಾರ್ಯಾಚರಣೆ ಆರಂಭಿಸಿದ ಸೇನೆ, ಇಂದು ಬೆಳಗಿನ ಜಾವ 4.30ರ ಸುಮಾರಿಗೆ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ ಎಂದು ರಕ್ಷಣಾ ಇಲಾಖೆ ಪಿಆರ್‌ಒ ಎಸ್.ಎನ್. ಅಚಾರ್ಯ ಹೇಳಿದ್ದಾರೆ.

ಒಂದು ಎಕೆ 47 ರೈಫಲ್ ಹಾಗೂ ಕೆಲವು ಶಸ್ತ್ರಾಸ್ತ್ರಗಳೊಂದಿಗೆ ಇಬ್ಬರು ಉಗ್ರರ ಮೃತದೇಹವನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT