ದೇಶ

ಮಂಡಳಿ ವ್ಯವಸ್ಥೆ ಕುರಿತು ಸಲಹೆ ಕೇಳಿರುವ ಸುಪ್ರೀಂ ಕೋರ್ಟ್ ಕ್ರಮದಲ್ಲಿ ತಪ್ಪಾಗಿದೆ: ರವಿಶಂಕರ್ ಪ್ರಸಾದ್

Sumana Upadhyaya

ನವದೆಹಲಿ: ಉನ್ನತ ನ್ಯಾಯಾಂಗಕ್ಕೆ ನ್ಯಾಯಾಧೀಶರ ನೇಮಕದಲ್ಲಿ ಮಂಡಳಿ ವ್ಯವಸ್ಥೆ ಸುಧಾರಣೆಗೆ ಸಲಹೆ ಕೇಳಲು ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿರುವ ಕ್ರಮದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಇದರಲ್ಲಿ ಏನೋ ತಪ್ಪಾಗಿದೆ ಎಂದು ಹೇಳಿದ್ದಾರೆ.

ಈ ವಿಷಯ ಕುರಿತಂತೆ ಸುಪ್ರೀಂ ಕೋರ್ಟ್ ನವೆಂಬರ್ 3ರಿಂದ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ. ಅಂದರೆ ನ್ಯಾಯಾಂಗ ಆಯೋಗ ಮಂಡಳಿ ವ್ಯವಸ್ಥೆಯಲ್ಲಿ ಏನೋ ತಪ್ಪಾಗಿತ್ತು ಎಂಬುದನ್ನು ಸೂಚಿಸುತ್ತದೆ ಎಂದು ಸುದ್ದಿಗಾರರಿಗೆ ಹೇಳಿದ್ದಾರೆ.
ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಕಾಯ್ದೆ, ನ್ಯಾಯಾಂಗ ಸುಧಾರಣೆಯ ಭಾಗವಾಗಿತ್ತು. ಇದು ಸಂಪೂರ್ಣ ಸಂಸತ್ತು ಮತ್ತು ಪ್ರಮುಖ ನ್ಯಾಯಶಾಸ್ತ್ರಕ್ಕೆ ಬೆಂಬಲವಾಗಿತ್ತು ಎಂದಿದ್ದಾರೆ.

ಕಳೆದ ವರ್ಷ ಕೇಂದ್ರ ಸರ್ಕಾರ ನ್ಯಾಯಾಧೀಶರ ನೇಮಕಾತಿ ಆಯೋಗ ಮಂಡಳಿ ವ್ಯವಸ್ಥೆ ಬದಲಿಗೆ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ(ಎನ್‍ಜೆಎಸಿ)ವನ್ನು ಅಸ್ತಿತ್ವಕ್ಕೆ ತರಲು ಕಾಯ್ದೆ ತಂದ ಸಂದರ್ಭದಲ್ಲಿ ರವಿಶಂಕರ್ ಪ್ರಸಾದ್ ಅವರು ಕೇಂದ್ರ ಕಾನೂನು ಸಚಿವರಾಗಿದ್ದರು.

ನೂತನ ಕಾನೂನನ್ನು ಸರ್ಕಾರ ತಕ್ಷಣವೇ ಜಾರಿಗೆ ತರಲು ಯತ್ನಿಸಿರಲಿಲ್ಲ. ಸಾಂವಿಧಾನಿಕ ಪರಿಶೀಲನಾ ಆಯೋಗ, ಆಡಳಿತ ಸುಧಾರಣಾ ಆಯೋಗ ಮತ್ತು ಸಂಸದೀಯ ಸ್ಥಾಯಿ ಸಮಿತಿಯ ಶಿಫಾರಸ್ಸಿನ ಮೇರೆಗೆ ಬದಲಾವಣೆ ತರಲು ಉದ್ದೇಶಿಸಲಾಗಿತ್ತು ಎಂದು ಹೇಳಿದ್ದಾರೆ.

SCROLL FOR NEXT