ಸಾಂದರ್ಭಿಕ ಚಿತ್ರ 
ದೇಶ

ಜವಾನನ ಮಗಳು ಈಗ ಜಡ್ಜ್

ಕೋರ್ಟ್‌ನ ನಾಲ್ಕನೇ ದರ್ಜೆ ನೌಕರನೊಬ್ಬನ ಮಗಳು ಮ್ಯಾಜಿಸ್ಟ್ರೇಟ್ ಕುರ್ಚಿಯಲ್ಲಿ ಕುಳಿತುಕೊಳ್ಳುವ ಕನಸು ಕಂಡು ಸಾಧಿಸುತ್ತಾಳೆ. ಇದು ಸಿನೆಮಾದ ಒನ್‌ಲೈನ್ ಕತೆ ಎನ್ನುತ್ತೀರಾ?..

ನಾಗ್ಪುರ: ಕೋರ್ಟ್‌ನ ನಾಲ್ಕನೇ ದರ್ಜೆ ನೌಕರನೊಬ್ಬನ ಮಗಳು ಮ್ಯಾಜಿಸ್ಟ್ರೇಟ್ ಕುರ್ಚಿಯಲ್ಲಿ ಕುಳಿತುಕೊಳ್ಳುವ ಕನಸು ಕಂಡು ಸಾಧಿಸುತ್ತಾಳೆ. ಇದು ಸಿನೆಮಾದ ಒನ್‌ಲೈನ್ ಕತೆ ಎನ್ನುತ್ತೀರಾ?

ನಾಗಪುರದಲ್ಲಿ ಇದು ನಿಜವಾಗಿದೆ. ಆಕೆಯ ಹೆಸರು ಅಮ್ರಿನ್ ಕಾಸಿಂ. ತಂದೆ ಗುಲಾಮ್ ಪಠಾಣ್ ನಾಗ್ಪುರದ ಹೆಚ್ಚುವರಿ ಸೆಷನ್ಸ್ ಕೋರ್ಟ್‌ನ ನಾಲ್ಕನೇ ದರ್ಜೆ ಜವಾನ. ಅಮ್ರಿನ್ ಕಳೆದ ಏಪ್ರಿಲ್ ನಲ್ಲಿ ಮೊದಲ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟರ ಪರೀಕ್ಷೆ ಬರೆದು ಉತ್ತೀರ್ಣಳಾಗಿದ್ದಾಳೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಪಠಾಣ್ ಕುಟುಂಬ ಮೂರು ತಲೆಮಾರಿನಿಂದ  ಕೋರ್ಟ್ ಜವಾನರಾಗಿದ್ದವರು. ಬಾಲ್ಯದಲ್ಲಿ ತಂದೆಯ ಜತೆ ಕೋರ್ಟ್‌ಗೆ ಹೋಗುತ್ತಿದ್ದ ಅಮ್ರಿನ್‌ಳ ಕಣ್ಣು ನ್ಯಾಯಾಧಿಶರ ಕುರ್ಚಿಯ ಮೇಲಿತ್ತು. ‘ನನಗೆ ಈ ಕುರ್ಚಿ ಬೇಡ, ನಾನು ಅಲ್ಲಿ  ಕುಳಿತುಕೊಳ್ಳಬೇಕು’ ಎಂದು ತಂದೆಯ ಜತೆ ಹೇಳುತ್ತಿದ್ದಳು ಆಕೆ. ಶನಿವಾರ ಪದವಿಪ್ರದಾನ ಸಮಾರಂಭದಲ್ಲಿ ಆಕೆ ಈ ಸನ್ನಿವೇಶವನ್ನು ನೆನಪು ಮಾಡಿಕೊಂಡಾಗ ಎಲ್ಲರ ಕಂಠ ಗದ್ಗದ.

ಅಮ್ರಿನ್‌ಳ ಬಾಲ್ಯವೇ ಕಾನೂನು ಸೇವೆ ಕೈಗೊಳ್ಳುವ ಕನಸಿನಿಂದ ಕೂಡಿದ್ದಾಗಿತ್ತು. ೨೦೧೧ರಲ್ಲಿ ಅಂಬೇಡ್ಕರ್ ಕಾಲೇಜಿನಲ್ಲಿ ಕಾನೂನು ಪದವಿ ಗಳಿಸಿದ್ದಳು. ನಂತರ ಶ್ಯಾಮನಾರಾಯಣ  ಅಭ್ಯಂಕರ್ ಎಂಬವರ ಅಡಿ ಪ್ರಾಕ್ಟೀಸ್ ಮಾಡುತ್ತಿದ್ದ ಆಕೆ, ಅವರ ಮಾರ್ಗದರ್ಶನದಲ್ಲಿ ಜೆಎಂಎಫ್ಸಿ ಪರೀಕ್ಷೆ ಕಟ್ಟಿ ಮೊದಲ ಯತ್ನದಲ್ಲೇ ಉತ್ತೀರ್ಣಳಾಗಿದ್ದಾಳೆ. ಈ ತಿಂಗಳ ಕೊನೆಯಲ್ಲಿ  ಭಂಡಾರಾದ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಆಕೆ ಸೇವೆ ಶುರು ಮಾಡಲಿದ್ದಾಳೆ. ದಿನಕ್ಕೆ ೧೬ ಗಂಟೆ ಅಧ್ಯಯನ ಮಾಡುತ್ತಿದ್ದ ಆಕೆಗೆ ರಾಜ್ಯದಲ್ಲಿ ೧೦ರೊಳಗಿನ ಸ್ಥಾನ ಪಡೆಯುವ ಕನಸಿತ್ತು. ಇತರ ಹುಡುಗಿಯರನ್ನು ಮದುವೆ ಮಾಡಿಸಿ ಸಾಗಹಾಕುತ್ತಿರುವಾಗ, ತಂದೆ, ಸೋದರ ನನ್ನ ಕನಸಿಗೆ ನೀರೆರೆದು ಪೋಷಿಸಿದರು ಎಂದಿದ್ದಾರೆ ಕಾಸಿಂ.

ಕನಸು ನನಸು
-ಅಮ್ರಿನ್ ಕಾಸಿಂ ತಂದೆ ಗುಲಾಂ ನಾಗ್ಪುರದ ಸೆಷನ್ಸ್ ಕೋರ್ಟ್‌ನಲ್ಲಿ ಜವಾನ
-ಈಕೆಯ ಕುಟುಂಬದ ಮೂರು ತಲೆಮಾರು ಕೋರ್ಟ್‌ನಲ್ಲಿ ಜವಾನರ ಕೆಲಸ ಮಾಡುತ್ತಿತ್ತು
-ಏಪ್ರಿಲ್‌ನಲ್ಲಿ ಮೊದಲ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪರೀಕ್ಷೆ ಬರೆದು ಉತ್ತೀರ್ಣ

ನನ್ನ ಪೋಷಕರು ಮತ್ತು ಸಹೋದರರು ವಿದ್ಯಾಭ್ಯಾಸಕ್ಕೆ ಸಹಕರಿಸಿದ್ದಾರೆ. ನನ್ನ ವಯಸ್ಸಿನ ಹೆಣ್ಣುಮಕ್ಕಳನ್ನು ಮದುವೆ ಮಾಡಿ ಸಾಗ ಹಾಕುತ್ತಿರುವಾಗ ನನ್ನನ್ನು ಈ ಮಟ್ಟದ ವರೆಗೆ ಓದಿಸಿದ್ದಾರೆ. ನನ್ನ ಕನಸು ಸಾಕಾರವಾಗುವಂತೆ ಮಾಡಿದ್ದಾರೆ.
-ಅಮ್ರಿನ್ ಕಾಸಿಂ ನೂತನ ಮ್ಯಾಜಿಸ್ಟ್ರೇಟ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

ಹೆಲಿಪ್ಯಾಡ್, ಸ್ವಿಮ್ಮಿಂಗ್ ಪೂಲ್, ಜಿಮ್: ಅನಿಲ್ ಅಂಬಾನಿಯ 3,716 ಕೋಟಿ ರೂ. ಬೆಲೆಬಾಳುವ 17 ಅಂತಸ್ತಿನ ಕಟ್ಟಡ 'Abode ಇಡಿ ವಶಕ್ಕೆ!

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

SCROLL FOR NEXT