ದೇಶ

'ಪೊಲೀಸರನ್ನು ಕೊಲ್ಲಿ' ಹೇಳಿಕೆ: ಹಾರ್ದಿಕ್ ವಿರುದ್ಧ ದೇಶದ್ರೋಹದ ಕೇಸ್ ದಾಖಲು

Lingaraj Badiger

ಅಹಮದಾಬಾದ್: ಪಟೇಲ್ ಸಮುದಾಯದ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಅನಾಮತ್ ಹೋರಾಟ ಸಮಿತಿಯ ಮುಖಂಡ ಹಾರ್ದಿಕ್ ಪಟೇಲ್ ವಿರುದ್ಧ ದೇಶದ್ರೋಹದ ಆರೋಪದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.

ಪಟೇಲ್ ಸಮುದಾಯದ ಮೀಸಲಾತಿಗಾಗಿ ಆತ್ಮಹತ್ಯೆ ಮಾಡಿಕೊಳ್ಳಿ ಇಲ್ಲವೆ ಪೊಲೀಸರನ್ನು ಕೊಲೆ ಮಾಡಿ ಎಂಬ ಹಾರ್ದಿಕ್ ಪೇಟೆಲ್ ಹೇಳಿಕೆ ಕ್ಯಾಮೆರಾದಲ್ಲಿ ಸೇರೆಯಾಗಿದ್ದು, ಈ ಸಂಬಂಧ ಪೊಲೀಸರು ಯುವ ನಾಯಕನ ವಿರುದ್ಧ ದೇಶದ್ರೋಹ ಕೇಸ್ ದಾಖಲಿಸಿದ್ದಾರೆ.

ಕಳೆದ 15 ದಿನಗಳ ಹಿಂದೆ ಸೂರತ್ನಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸುತ್ತಿದ್ದ ವೇಳೆ, ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು. ಇದನ್ನು ತಪ್ಪಾಗಿ ಅರ್ಥೈಯಿಸಲಾಗಿದೆ ಹಾರ್ದಿಕ್ ಪಟೇಲ್ ಹೇಳಿದ್ದಾರೆ. ಅಲ್ಲದೆ ಆ ವಿಡಿಯೋ ಟೇಪ್ನ ಸಾಚಾತನವನ್ನು ಪ್ರಶ್ನಿಸಿದ್ದಾರೆ.

ಆದರೆ, ಗುಜರಾತ್ ಪೊಲೀಸರು ಮಾತ್ರ, ನಾವು ಆ ವಿಡಿಯೋವನ್ನು ಪರಿಶೀಲಿಸಿದ್ದು, ಅದು 'ಸಿದ್ಧಪಡಿಸಿದ್ದು' ಅಲ್ಲ. ಹೀಗಾಗಿ ಕಳೆದ ರಾತ್ರಿ ಸೂರತ್ನಲ್ಲಿ ಆತನ ವಿರುದ್ಧ ದೇಶದ್ರೋಹ ಆರೋಪದ ಕೇಸ್ ದಾಖಲಿಸಲಾಗಿದೆ. ಇದು ಗಂಭೀರ ಪ್ರಕರಣವಾಗಿದ್ದ, ಜಾಮೀನು ರಹಿತ ಅಪರಾಧ ಎಂದಿದ್ದಾರೆ.

SCROLL FOR NEXT