ಪೊಲೀಸರ ನಿಯೋಜನೆ 
ದೇಶ

ಪಂಜಾಬ್ ನಲ್ಲಿ ಗ್ರಂಥ ಸಾಹಿಬ್ ಅಪವಿತ್ರ: ಇಬ್ಬರ ಬಂಧನ

ಸಿಕ್ಖರ ಪವಿತ್ರ ಗುರು ಗ್ರಂಥ ಸಾಹಿಬ್‌ ಅಪವಿತ್ರಗೊಳಿಸಿದ ಆರೋಪದ ಮೇಲೆ ಪಂಜಾಬ್‌ ಪೊಲೀಸರು ಫ‌ರೀದ್‌ಕೋಟ್‌ ಜಿಲ್ಲೆಯ ಬರ್ಗಾರಿ ಗ್ರಾಮದಲ್ಲಿ ಇಬ್ಬರನ್ನು ...

ಅಮೃತಸರ: ಸಿಕ್ಖರ ಪವಿತ್ರ ಗುರು ಗ್ರಂಥ ಸಾಹಿಬ್‌ ಅಪವಿತ್ರಗೊಳಿಸಿದ ಆರೋಪದ ಮೇಲೆ ಪಂಜಾಬ್‌ ಪೊಲೀಸರು ಫ‌ರೀದ್‌ಕೋಟ್‌ ಜಿಲ್ಲೆಯ ಬರ್ಗಾರಿ ಗ್ರಾಮದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ರೂಪೀಂದರ್‌ ಸಿಂಗ್‌ ಮತ್ತು ಆತನ ಸಹೋದರ ಜಸ್ವೀಂದರ್‌ ಎಂದು ಗುರುತಿಸಲಾಗಿದೆ.

ಸಿಕ್ಖರ ಧಾರ್ಮಿಕ ಗ್ರಂಥವನ್ನು ಅಪವಿತ್ರಗೊಳಿಸಿರುವ ವಿಷಯ ಇವರ ಫೋನ್‌ ಸಂಭಾಷಣೆಯನ್ನು ಕದ್ದಾಲಿಕೆ ಬಳಿಕ ವಿಷಯ ತಿಳಿಯಿತು ಎಂದು ಪಂಜಾಬಿನ ಹೆಚ್ಚುವರಿ ಜಿಜಿಪಿ, ಐಪಿಎಸ್‌ ಸಹೋತಾ ತಿಳಿಸಿದ್ದಾರೆ.

ಈ ಆರೋಪಿಗಳ ಫೋನ್‌ ಕರೆಗಳು ದುಬೈ ಮತ್ತು ಆಸ್ಟ್ರೇಲಿಯದೊಂದಿಗೆ ನಂಟು ಹೊಂದಿರುವುದು ಗೊತ್ತಾಗಿದೆ. ಮಾತ್ರವಲ್ಲದೆ ಈ ಆರೋಪಿಗಳು ಫೋನ್‌ ಸಂಭಾಷಣೆಯ ಮೂಲಕ ಗ್ರಂಥವನ್ನು ಅಪವಿತ್ರಗೊಳಿಸದ ಕೆಲಸವನ್ನು ಖುದ್ದು ಇವರೇ ಮಾಡಿರುವುದು ಖಾತರಿಯಾಗಿದೆ.

ಅಮೃತ್‌ಸರ, ಲೂಧಿಯಾನಾ, ಜಾಲಂಧರ ಮತ್ತು ತರಣ್‌ ತಾರಣ್‌ನಲ್ಲಿ ಹೆಚ್ಚಿನ ಭದ್ರತೆಗಾಗಿ ಕೇಂದ್ರೀಯ ಪಡೆಗಳನ್ನು ನಿಯೋಜಿಸಲಾಗಿದೆ. ಅಮೃತಸರದಲ್ಲಿ ಸೇನೆಯು ಧ್ವಜ ಪಥಸಂಚಲನವನ್ನು ನಡೆಸಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!