ದೇಶ

ಶತಾಬ್ದಿ ಎಸಿ ಡಬಲ್‍ಡೆಕ್ಕರ್: ಗೋವಾ-ಮುಂಬೈ ನಡುವೆ ಸಂಚಾರ ಆರಂಭ

Mainashree
ನವದೆಹಲಿ: ದೇಶದ ಮೊದಲ ಹವಾ ನಿಯಂತ್ರಿತ ಡಬಲ್ ಡೆಕ್ಕರ್ ಶತಾಬ್ದಿ ರೈಲು ಶೀಘ್ರದಲ್ಲಿ ಮುಂಬೈ-ಗೋವಾ ನಡುವೆ ಸಂಚರಿಸಲಿದೆ. ಗೋವಾ ಪ್ರಮುಖ ಪ್ರವಾಸಿ ತಾಣವಾಗಿದ್ದು ದೇಶಾದ್ಯಂತ ಪ್ರವಾಸಿಗಳ ನ್ನು ಆಕರ್ಷಿಸಲಿದೆ. 
ಈ ಡಬಲ್ ಡೆಕ್ಕರ್ ಅಲ್ಲಿನ ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ ನೀಡಲಿದೆ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹೌರಾ ಮತ್ತು ಧನ್‍ಬಾದ್ ನಡುವಿನ ಮೊದಲ ಡಬಲ್ ಡೆಕ್ಕರ್ ರೈಲು 2011ರ ಅಕ್ಟೋಬರ್ ನಲ್ಲಿ ಆರಂಭವಾಯಿತು.
ನಂತರ ಮುಂಬೈ-ಅಹಮದಾ ಬಾದ್, ಚೆನ್ನೈ-ಬೆಂಗಳೂರು, ದೆಹಲಿ-ಜೈಪುರ, ದೆಹಲಿ-ಲಖ್ನೊ ಮಧ್ಯೆ ಆರಂಭವಾಯಿತು. ಆದರೆ ಶತಾಬ್ದಿ ಎಕ್ಸ್‍ಪ್ರೆಸ್‍ನಲ್ಲಿ ಡಬಲ್‍ಡೆಕ್ಕರ್, ಹವಾನಿಯಂತ್ರಿತ ಇದೇ ಮೊದಲು. 
ಶತಾಬ್ದಿ ಎಕ್ ಸಪ್ರೆಸ್ ಭಾರತೀಯ ರೈಲ್ವೆಯ ಉನ್ನತ ದರ್ಜೆಯದ್ದಾಗಿದೆ. ಹೊಸ ಎಸಿ ಡಬಲ್ ಡೆಕ್ಕರ್ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು ಬೋಗಿಗಳನ್ನು ವಿಶೇಷವಾಗಿ ಅಭಿವೃದ್ಧಿ ಮಾಡಲಾಗಿದೆ. 
SCROLL FOR NEXT