ಆಕಸ್ಮಿಕವಾಗಿ ಪಾಕಿಸ್ತಾನ ತಲುಪಿದ್ದ ಗೀತಾ 
ದೇಶ

ಪಾಕಿಸ್ತಾನ ಗೀತಾಳನ್ನು ವಾಪಸ್ ಕಳಿಸಿದಂತೆ ರಂಜಾನ್ ನನ್ನೂ ವಾಪಸ್ ಕಳಿಸಲಿರುವ ಭಾರತ

ಆಕಸ್ಮಿಕವಾಗಿ ಪಾಕಿಸ್ತಾನ ತಲುಪಿದ್ದ ಗೀತಾ 15 ವರ್ಷಗಳ ನಂತರ ಭಾರತಕ್ಕೆ ವಾಪಸ್ಸಾಗಿರುವ ಬೆನ್ನಲ್ಲೇ ರಂಜಾನ್ ಎಂಬ ಪಾಕಿಸ್ತಾನದ ಯುವಕನೊಬ್ಬ ಭಾರತದಲ್ಲಿರುವ ಪ್ರಕರಣ ಬಹಿರಂಗವಾಗಿದೆ.

ನವದೆಹಲಿ: ಆಕಸ್ಮಿಕವಾಗಿ ಪಾಕಿಸ್ತಾನ ತಲುಪಿದ್ದ ಗೀತಾ 15 ವರ್ಷಗಳ ನಂತರ ಭಾರತಕ್ಕೆ ವಾಪಸ್ಸಾಗಿರುವ ಬೆನ್ನಲ್ಲೇ ರಂಜಾನ್ ಎಂಬ ಪಾಕಿಸ್ತಾನದ ಯುವಕನೊಬ್ಬ ಭಾರತದಲ್ಲಿರುವ ಪ್ರಕರಣ ಬಹಿರಂಗವಾಗಿದೆ.
ಗೀತಾ ಭಾರತಕ್ಕೆ ವಾಪಸ್ಸಾಗುತ್ತಿದ್ದಂತೆಯೇ ರಂಜಾನ್ ಎಂಬ ಪಾಕಿಸ್ತಾನ ಯುವಕನಲ್ಲೂ ತವರಿಗೆ ವಾಪಸ್ ತೆರಳುವ ಭರವಸೆ ಮೂಡಿದೆ. ಪ್ರಧಾನಿ ಕಾರ್ಯಾಲಯದ ಮಾಹಿತಿ ಪ್ರಕಾರ, ಭಾರತ ಸರ್ಕಾರ ರಂಜಾನ್ ಪ್ರಕರಣದ ಬಗ್ಗೆ ಮರು ನಿರ್ಣಯ ಕೈಗೊಳ್ಳಲಿದ್ದು,  ವಾಪಸ್ ಕಳಿಸುವ ಬಗ್ಗೆ ಚಿಂತನೆ ನಡೆಸಿದೆ.
15 ವರ್ಷದ ಮೊಹಮ್ಮದ್ ರಂಜಾನ್, ನಾಲ್ಕು ವರ್ಷಗಳ ಹಿಂದೆ ಬಾಂಗ್ಲಾ ದೇಶದಿಂದ ಭಾರತಕ್ಕೆ ಆಕಸ್ಮಿಕವಾಗಿ ಬಂದಿದ್ದ. ತಂದೆ ಹಾಗೂ ಮಲತಾಯಿ ನೀಡುತ್ತಿದ್ದ ಕಿರುಕುಳ ತಾಳಲಾರದೇ ಮೊಹಮ್ಮದ್ ರಂಜಾನ್ ಭಾರತಕ್ಕೆ ಬಂದಿದ್ದ ಎನ್ನಲಾಗಿದೆ.
ರಂಜಾನ್ ನ ತಂದೆ ಬಾಂಗ್ಲಾ ದೇಶದಿಂದ ಪಾಕಿಸ್ತಾನಕ್ಕೆ ವಲಸೆ ಹೋಗಿರುವ ಬಗ್ಗೆ ಮಾಹಿತಿ ದೊರೆತಿದೆ. ಪಾಕಿಸ್ತಾನಕ್ಕೆ ಸೇರಿದ ಯುವಕನನ್ನು 2013 ರಲ್ಲಿ ಬಂಧಿಸಲಾಗಿತ್ತು. ಗೀತಾ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅನ್ಸರ್ ಬರ್ನಿ ಅವರು ರಂಜಾನ್ ಬಿಡುಗಡೆಗೂ ಒತ್ತಾಯಿಸುತ್ತಿದ್ದಾರೆ.  
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ  ಪ್ರಧಾನಿ ಕಾರ್ಯಾಲಯದ ಸಲಹೆಗಾರ ಅಶುತೋಷ್ ಶುಕ್ಲಾ ರಂಜಾನ್ ಗೆ ಸಂಬಂಧಿಸಿದ ದಾಖಲೆಗಳನ್ನು ರಾಷ್ಟ್ರಪತಿಗಳಿಗೆ ಕಳಿಸಿರುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ