ಮುಂಬೈ: ಭಾರತೀಯ ಸಂಗೀತ ಲೋಕವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರಿಗೆ ನಿನ್ನೆ ಹೃದಯನಾಥ್ ಮಂಗೇಶ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪಂಡಿತ್ ಹೃದಯನಾಥ್ ಮಂಗೇಶ್ಕರ್ ಅವರ ಜನ್ಮ ದಿನದಂದು 55ನೇ ಹೃದಯನಾಥ್ ಮಂಗೇಶ್ಕರ್ ಪ್ರಶಸ್ತಿಯನ್ನು ರೆಹಮಾನ್ ಅವರಿಗೆ ಖ್ಯಾತ ಬಾಲಿವುಡ್ ನಿರ್ದೇಶಕ ಸುಭಾಶ್ ಗಾಯ್ ಅವರು ಪ್ರಧಾನ ಮಾಡಿದರು. ಹೃದಯನಾಥ್ ಮಂಗೇಶ್ಕರ್ ಅವರು ಖ್ಯಾತ ಗಾಯಕರಾದ ಲತಾ ಮಂಗೇಶ್ಕರ್ ಮತ್ತು ಆಶಾ ಭೋಂಸ್ಲೆ ಅವರ ಸಹೋದರ.
ಈ ಹಿಂದೆ ಲತಾ ಮಂಗೇಶ್ಕರ್, ಆಶಾ ಭೋಂಸ್ಲೆ, ಅಮಿತಾಬ್ ಬಚ್ಚನ್ ಮತ್ತು ಸುಲೋಚನ ಥೈ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.