ನವದೆಹಲಿ: ಬಿಹಾರದಲ್ಲಿ 3ನೇ ಹಂತದ ಚುನಾವಣೆ ಆರಂಭವಾಗಿದ್ದು, ಮತದಾನದಲ್ಲಿ ಈ ವರೆಗೂ ಶೇ.26.94ರಷ್ಟು ಜನರು ಮತ ಚಲಾಯಿಸಿರುವುದಾಗಿ ಬುಧವಾರ ತಿಳಿದುಬಂದಿದೆ.
6 ಜಿಲ್ಲೆಗಳಲ್ಲಿ ಇದೀಗ ಶೇ.20 ರಷ್ಟು ಮತದಾನವಾಗಿದ್ದು, ಪಾಟ್ನ (16.35), ವೈಶಾಲಿ (23.09), ಸರಾನ್ (23.94) ನಳಂದಾ (21.36), ಬುಕ್ಸಾರ್ (22.05) ಹಾಗೂ ಭೋಜ್ ಪುರದಲ್ಲಿ (22.68) ರಷ್ಟು ಮತದಾನವಾಗಿರುವುದಾಗಿ ತಿಳಿದುಬಂದಿದೆ.
ಬಿಹಾರ ಚುನಾವಣೆ ಸಂಬಂಧ ಈಗಾಗಲೇ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಬಿಹಾರ ಜನತೆ ಚುನಾವಣೆಯಲ್ಲಿ ಪಾಲ್ಗೊಂಡು ಅತೀ ಹೆಚ್ಚು ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಕೋರಿದ್ದಾರೆ.