ಪಟಾಕಿ ನಿಷೇಧ ಸಾಧ್ಯವಿಲ್ಲ, ಜಾಗೃತಿ ಅಭಿಯಾನಕ್ಕೆ ಕೇಂದ್ರಕ್ಕೆ ಸುಪ್ರಿಂ ಸೂಚನೆ
ದೀಪಾವಳಿ ಹಬ್ಬದಲ್ಲಿ ಹಚ್ಚುವ ಪಟಾಕಿ ನಿಷೇಧಿಸಲು ಸುಪ್ರಿಂ ಕೋರ್ಟ್ ಹಿಂದೇಟು ಹಾಕಿದೆ.ಅಕ್ಟೋಬರ್ 31 ರಿಂದ ನವೆಂಬರ್ 12 ರವರೆಗೆ ಪಟಾಕಿ ಬಗ್ಗೆ ಜಾಗೃತಿ ಅಭಿಯಾನ ಆಯೋಜಿಸುವಂತೆ ಕೇಂದ್ರಕ್ಕೆ ಸುಪ್ರಿಂಕೋರ್ಟ್ ಸೂಚನೆ ನೀಡಿದೆ.
ನವದೆಹಲಿ: ದೀಪಾವಳಿ ಹಬ್ಬದಲ್ಲಿ ಹಚ್ಚುವ ಪಟಾಕಿ ನಿಷೇಧಿಸಲು ಸುಪ್ರಿಂ ಕೋರ್ಟ್ ಹಿಂದೇಟು ಹಾಕಿದೆ.
ಹೆಚ್ಚುತ್ತಿರುವ ಮಾಲಿನ್ಯತೆ ಕಡಿಮೆ ಮಾಡಲು ಅಕ್ಟೋಬರ್ 31 ರಿಂದ ನವೆಂಬರ್ 12 ರವರೆಗೆ ಪಟಾಕಿ ಬಗ್ಗೆ ಜಾಗೃತಿ ಅಭಿಯಾನ ಆಯೋಜಿಸುವಂತೆ ಕೇಂದ್ರಕ್ಕೆ ಸುಪ್ರಿಂಕೋರ್ಟ್ ಸೂಚನೆ ನೀಡಿದೆ.
ಪಟಾಕಿ ನಿಷೇಧ ಕುರಿತಂತೆ ಮೂರು ಮಕ್ಕಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತಂತೆ ವಿಚಾರಣೆ ನಡೆಸಿದ ನ್ಯಾಯಾಲಯ ಪಟಾಕಿ ನಿಷೇಧಕ್ಕೆ ಹಿಂದೇಟು ಹಾಕಿದೆ. ಇನ್ನು ಪಟಾಕಿ ಹಚ್ಚುವ ಸಮಯ ನಿಗದಿ ಸಂಬಂದ ಬೆಳಗ್ಗೆ ಆರು ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಮಾತ್ರ ಹಚ್ಚುವಂತೆ 2001 ರಲ್ಲಿ ಸುಪ್ರಿಂ ಕೋರ್ಟ್ ಆದೇಶ ಹೊರಡಿಸಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.