ಶಿಮ್ಲಾ: ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿರುವ ಪೀಟರ್ ಹಾಫ್ ಹೋಟೆಲ್ ಗೆ ವಾಲ್ಮಿಕಿ ಹೆಸರಿಡಿ ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.
ರಾಮಾಯಣ ರಚಿಸಿದ ವಾಲ್ಮಿಕಿ ಋಷಿ ಹೆಸರನ್ನು ಪೀಟರ್ ಹಾಫ್ ಹೋಟೆಲ್ ಗೆ ಇಡಬೇಕು ಎಂದು ವಿಎಚ್ ಪಿ ಸರ್ಕಾರದ ಮೇಲೆ ಒತ್ತಡ ಹೇರಿದೆ ಎಂದು ಮೂಲಗಳು ತಿಳಿಸಿವೆ.
ವಿಎಚ್ ಪಿ ಕಾರ್ಯದರ್ಶಿ ಮನೋಜ್ ಕುಮಾರ್ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ಬಂದು ಅರ್ಧ ಶತಮಾನ ಮುಗಿದಿದೆ, ಬ್ರಿಟಿಷರು ನಮ್ಮ ದೇಶ ಬಿಟ್ಟು ಹೋಗಿ ಇಷ್ಟು ವರ್ಷಗಳಾಗಿದ್ದರು ಇನ್ನು ಕೆಲ ಕಟ್ಟಡಗಳು ಅವರ ಹೆಸರಿನಲ್ಲೇ ಕರೆಯಲಾಗುತ್ತಿದೆ. ಬ್ರಿಟಿಷರ ಹೆಸರುಳ್ಳ ಕಟ್ಟಡಗಳಿಗೆ ನಮ್ಮ ದೇಶದ ಇತಿಹಾಸಕಾರರ ಹೆಸರಿಡಬೇಕು ಎಂದು ಹೇಳಿದ್ದಾರೆ.
ಪೀಟರ್ ಹಾಫ್ ಹೋಟೆಲ್ ಗೆ ಮಹರ್ಷಿ ವಾಲ್ಮಿಕಿ ಹೆಸರಿಡಬೇಕು. ಇದರಿಂದ ಹೆಚ್ಚಿನ ಜನರು ವಾಲ್ಮಿಕಿ ಜೀವನ ಚರಿತೆ ಕೇಳಿ ಸ್ಫೂರ್ತಿಗೊಳ್ಳುತ್ತಾರೆ ಎಂದು ಅವರು ತಿಳಿಸಿದ್ದಾರೆ.
1990ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದ್ದಾಗ ಈ ಹೋಟೆಲ್ ಗೆ ಮೇಘದೂತ ಎಂದು ನಾಮಕರಣ ಮಾಡಿತ್ತು. ಆದರೆ 1993ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಮತ್ತೆ ಪೀಟರ್ ಹಾಫ್ ಎಂದು ನಾಮಕರಣ ಮಾಡಿತು. ಈ ಹೋಟೆಲನ್ನು ಪಂಚತಾರಾ ಹೋಟೆಲ್ ಆಗಿ ಪರಿವರ್ತಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics