ಡಿಜಿಟಲೀಕರಣ 
ದೇಶ

ಡಿಜಿಟಲೀಕರಣ: ರಾಜ್ಯಕ್ಕೆ ತೆಲಂಗಾಣ ಪೈಪೋಟಿ

ತೆಲಂಗಾಣ ಹೊಸ ರಾಜ್ಯವಾಗಿದ್ದು, ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲೀಕರಣದ ಅಭಿವೃದ್ಧಿಯಲ್ಲಿ ಬೆಂಗಳೂರಿಗೆ ಪೈಪೋಟಿ ನೀಡಲು ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ.

ಬೆಂಗಳೂರು: ತೆಲಂಗಾಣ ಹೊಸ ರಾಜ್ಯವಾಗಿದ್ದು, ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲೀಕರಣದ ಅಭಿವೃದ್ಧಿಯಲ್ಲಿ ಬೆಂಗಳೂರಿಗೆ ಪೈಪೋಟಿ ನೀಡಲು ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ತೆಲಂಗಾಣದ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ತಾರಕ ರಾಮರಾವ್ ಹೇಳಿದರು.
ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಗುರುವಾರ ಆರಂಭಗೊಂಡ ಸಿಬಿಟ್ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಹೈದರಾಬಾದ್ ಈಗಾಗಲೇ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರೆದಿದೆ. ಹೊಸ ರಾಜ್ಯ ರಚನೆಯ ಬಳಿಕ ಕೆಲವೊಂದು ಅಂತರಗಳು ಸೃಷ್ಟಿಯಾಗಿವೆ.
ಇದನ್ನು ನೀಗಿಸಲು ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ತಿಳಿಸಿದರು. ಉದ್ಯಮಗಳಿಗೆ ತಜ್ಞ ಉದ್ಯೋಗಿಗಳನ್ನು ಒದಗಿಸುವ ಉದ್ದೇಶದಿಂದ ತೆಲಂಗಾಣ ಸರ್ಕಾರ ಶೈಕ್ಷಣಿಕ ಸಂಸ್ಥೆಗಳು ಮತ್ತು ಸಂಬಂಧಿಸಿದ ಕಂಪನಿಗಳೊಂದಿಗೆ ಕೈ ಜೋಡಿಸಿದ್ದು ಕೌಶಲ್ಯ ಅಭಿವೃದ್ಧಿಗೆ ಒಟ್ಟು ನೀಡುತ್ತಿದೆ. ಮುಂದಿನ ಮೂರು ವರ್ಷಗಳ 85 ಲಕ್ಷ ಬ್ರಾಡ್ ಬ್ಯಾಂಡ್ ಸಂಪರ್ಕವನ್ನು ರಾಜ್ಯದಲ್ಲಿ ಕಲ್ಪಿಸಲಾಗುತ್ತಿದೆ. ಪ್ರತಿ ಮನೆಯಲ್ಲಿ ಕನಿಷ್ಟ ಒಬ್ಬ ಕಂಪ್ಯೂಟರ್ ಸಾಕ್ಷರರಿರಬೇಕು ಎನ್ನುವುದು ಸರ್ಕಾರದ ಗುರಿ ಎಂದರು.
ಕೇಂದ್ರ ಸರ್ಕಾರದ ಡಿಜಿಟಲ್ ಆಡಳಿತ ಇಲಾಖೆ ಅಪರ ಕಾರ್ಯದರ್ಶಿ ಡಾ.ಅಜಯ್ ಕುಮಾರ್ ಮಾತನಾಡಿ, ರಾಷ್ಟ್ರೀಯ ಕಾರ್ಯಕ್ರಮದಡಿ ಪ್ರತಿ ಗ್ರಾಮಗಳಿಗೂ ಫೈಬರ್ ನೆಟ್ ವರ್ಕ್ ಕಲ್ಪಿಸಲು ಉದ್ದೇಶಿಸಿದ್ದು, ಸುಮಾರು ರೂ.39 ,200 ಕೋಟಿ ವೆಚ್ಚವಾಗಲಿದೆ. ಯೋಜನೆ ಯಶಸ್ಸಿಗೆ ಖಾಸಗಿ ಕಂಪನಿಗಳು ಮಹತ್ವದ ಪಾತ್ರ ವಹಿಸಬೇಕು ಎಂದು ಮನವಿ ಮನವಿ ಮಾಡಿದರು.
ಎಸ್.ಟಿ.ಪಿ.ಐ ನಿರ್ದೇಶಕ ಡಾ. ಓಂಕಾರ್ ರೈ, ಕೆನಡದ ಕನ್ಸುಲೇಟ್ ಜನರಲ್ ಸಿಡ್ನಿ ಫ್ರಾಂಕ್, ಟೆಕ್ನೋಪಾರ್ಕ್ ಸೀಒ ಗಿರೀಶ್ ಬಾಬು, ಉತ್ತರ ಪ್ರದೇಶ ಮುಖ್ಯಮಂತ್ರಿಗಳ ಐಟಿ ಸಲಹೆಗಾರ ನವೀನ್ ಕುಮಾರ್, ಫಿಕ್ಕಿ ಮಹಾನಿರ್ದೇಶಕ ಡಾ. ಅರಬಿಂದ್ ಪ್ರಸಾದ್ ಮಾತನಾಡಿದರು.
ರಾಷ್ಟ್ರೀಯ ವಹಿವಾಟಿಕೆ ವೇದಿಕೆ: ವೇದಿಕೆ ಡಿಜಿಟಲ್ ಅರ್ಥವ್ಯವಸ್ಥೆ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದು ಸಿಬಿಟ್ ಇಂಡಿಯಾ 2015 ವಸ್ತು ಪ್ರದರ್ಶನ ಒಂದೇ ಸೂರಿನಡಿ ಎಲ್ಲಾ ಬಗೆಯ ಡಿಜಿಟಲ್ ಪರಿಹಾರಗಳನ್ನು ಒದಗಿಸುತ್ತದೆ. ತನ್ಮೂಲಕ ಡಿಜಿಟಲ್ ಇಂಡಿಯಾ ಸಾಕಾರಕ್ಕೆ ವೇದಿಕೆ ಕಲ್ಪಿಸಿದೆ. ಹೊಸ ವಹಿವಾಟು ಅವಕಾಶಗಳ ಅನ್ವೇಷಣೆಗೆ ಜಾಗತಿಕ ಮತ್ತು ರಾಷ್ತ್ರೀಯ ವಹಿವಾಟುದಾರರಿಗೆ ವೇದಿಕೆ ಕಲ್ಪಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

SCROLL FOR NEXT