ದೇಶ

25 ಪಾರಂಪರಿಕ ತಾಣಗಳನ್ನು ಪಟ್ಟಿ ಮಾಡಿದ ಜಮ್ಮು-ಕಾಶ್ಮೀರ ಸರ್ಕಾರ

Srinivas Rao BV

ಜಮ್ಮು-ಕಾಶ್ಮೀರ: ಸಂರಕ್ಷಣೆಯಾಗಬೇಕಿರುವ 25 ಪಾರಂಪರಿಕ ತಾಣಗಳನ್ನು ಜಮ್ಮು-ಕಾಶ್ಮೀರ ಸರ್ಕಾರ ಪಟ್ಟಿ ಮಾಡಿದೆ.  
ಜಮ್ಮು-ಕಾಶ್ಮೀರ ಹೆರಿಟೇಜ್ ಸಂರಕ್ಷಣೆಯ ಕಾಯ್ದೆ 2010 ರ ಪ್ರಕಾರ, ಸರ್ಕಾರ 27 ಪಾರಂಪರಿಕ ತಾಣಗಳನ್ನು ಪಟ್ಟಿ ಮಾಡಿದೆ ಎಂದು ಸಂಸ್ಕೃತಿ ಸಚಿವೆ ಪ್ರಿಯಾ ಸೇಥಿ ಹೇಳಿದ್ದಾರೆ. ಪಾರಂಪರಿಕ ತಾಣಗಳನ್ನು ಕಾಪಾಡಲು ಸರ್ಕಾರ ಪ್ರಯತ್ನಿಸುತ್ತಿದ್ದು ಐತಿಹಾಸಿಕ ಸ್ಥಳಗಳನ್ನು ಮುಂದಿನ ಪೀಳಿಗೆಗೆ ನೀಡಲು ಶ್ರಮಿಸುತ್ತಿದೆ ಎಂದು ಹೇಳಿದ್ದಾರೆ. 
ಜಮ್ಮು ಪ್ರದೇಶ ಐತಿಹಾಸಿಕ ಪ್ರಾಮುಖ್ಯತೆ ಪಡೆದಿದ್ದು ಡೋಗ್ರಾ ಆಡಳಿತ ಕಾಲದಲ್ಲಿ ಆರ್ಥಿಕ ಚಟುವಟಿಕೆಗಳ ಕೇಂದ್ರವಾಗಿತ್ತು ಎಂದು ಸೇಥಿ ತಿಳಿಸಿದ್ದಾರೆ.

SCROLL FOR NEXT