ನವದೆಹಲಿ: ಬಿಹಾರ ಚುನಾವಣಾ ಪ್ರಚಾರದ ವೇಳೆ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಜತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಯಾಕೆ ವೇದಿಕೆ ಹಂಚಿಕೊಂಡಿಲ್ಲ ಎಂಬುದರ ಬಗ್ಗೆ ಊಹಾಪೋಹಗಳೇನೂ ಬೇಡ ಎಂದು ಕಾಂಗ್ರೆಸ್ ಹೇಳಿದೆ.
ಮಿತ್ರಪಕ್ಷಗಳು ಯಾವತ್ತೂ ಒಂದಾಗಿ ಹೋರಾಟ ನಡೆಸುತ್ತವೆ. ನಮ್ಮದು ಬಹುದೊಡ್ಡ ಮೈತ್ರಿ. ನಾವೆಲ್ಲರೂ ಜತೆಗೇ ಇದ್ದೇವೆ. ಕಾಂಗ್ರೆಸ್ ಅಧ್ಯಕ್ಷರು ಲಾಲೂ ಜತೆ ವೇದಿಕೆ ಹಂಚಿಕೊಂಡಿದ್ದಾರೆ.
ಹೀಗಿರುವಾಗ ಉಪಾಧ್ಯಕ್ಷರು ವೇದಿಕೆ ಹಂಚಿಕೊಳ್ಳದೇ ಇರುವುದನ್ನು ದೊಡ್ಡ ಸುದ್ದಿ ಮಾಡಬೇಕಿಲ್ಲ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ.