ದೇಶ

ಯೋಗವನ್ನು ಕ್ರೀಡೆಯಾಗಿ ಗುರುತಿಸಬೇಕು: ಕೇಂದ್ರ ಸರ್ಕಾರ

Srinivas Rao BV

ನವದೆಹಲಿ: ಯೋಗವನ್ನು ಕ್ರೀಡೆಯಾಗಿ ಗುರುತಿಸಬೇಕೆ ಹೊರತು ನಿರ್ದಿಷ್ಟ ಕೋಮಿನ ಆಧಾರದಲ್ಲಿ ಗುರುತಿಸಬಾರದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಯೋಗ ಭಾರತೀಯರ ಪುರಾತನ ಪದ್ಧತಿಯಾಗಿದ್ದು ಅದನ್ನು ಕ್ರೀಡೆಯಾಗಿ ಅಭ್ಯಾಸ ಮಾಡುವುದಕ್ಕೆ ಇದು ಸೂಕ್ತ ಸಮಯ, ಯೋಗವೆಂಬ ಸಂಸ್ಕೃತಿಯನ್ನು ಧರ್ಮಾತೀತವಾಗಿ ಆಚರಿಸಲಾಗುತ್ತಿದೆ ಎಂದು ಕ್ರೀಡಾ ಸಚಿವಾಲಯದ ಜಂಟಿ ಕಾರ್ಯದರ್ಶಿ ಓಂಕಾರ್ ಕೇದಿಯ ಅಭಿಪ್ರಾಯಪಟ್ಟಿದ್ದಾರೆ.
ಅನುದಾನ ಬಿಡುಗಡೆ ಮಾಡುವ ವಿಷಯದಲ್ಲಿ ಕೇಂದ್ರ ಸರ್ಕಾರ ಯೋಗವನ್ನು ಆದ್ಯತೆಯ ವಿಭಾಗಕ್ಕೆ ಸೇರಿಸಿದೆ.  ಬೇರೆ ದೇಶಗಳಲ್ಲಿ ಯೋಗವನ್ನು ಕ್ರೀಡೆಯೆಂದು ಗುರುತಿಸದೇ ಇರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಮಾತ್ರ ಯೋಗ ಕ್ರೀಡೆಗೆ ಸೀಮಿತವಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕೇದಿಯ, ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಯೆಂದು ಗುರುತಿಸುವುದಕ್ಕೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಯೋಗಕ್ಕಾಗಿ ಪ್ರತ್ಯೇಕ ಒಕ್ಕೂಟ ಸ್ಥಾಪನೆ ಅಗತ್ಯವಿದ್ದು, ಒಕ್ಕೂಟದ ಮೂಲಕ ಯೋಗವನ್ನು ಕ್ರೀಡೆಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಕೇದಿಯ ತಿಳಿಸಿದ್ದಾರೆ. ಇದೇ ವೇಳೆ ಬಾಕ್ಸರ್ ಗಳಿಗೆ ಒಕ್ಕೂಟದ ಅಗತ್ಯತೆ ಇದೆ ಎಂದಿದ್ದು ಕೇಂದ್ರ ಸರ್ಕಾರ ಬಾಕ್ಸರ್ ಗಳಿಗೆ ಅಗತ್ಯ ನೆರವು ನೀಡಲಿದೆ ಎಂದು ಭರವಸೆ ನೀಡಿದ್ದಾರೆ.

SCROLL FOR NEXT