ನವದೆಹಲಿ: ಬೆಳವಣಿಗೆಗೆ ಉತ್ತೇಜನ ನೀಡಲು ಮೂಲಸೌಕರ್ಯಗಳ ಅಭಿವೃದ್ಧಿಗೆ ದೇಶದ ಪ್ರಮುಖ ಆದಾಯದ ಮೂಲವಾದ ರೈಲ್ವೆ ವಲಯವನ್ನು ಬದಲಾಯಿಸಲು ಭಾರತೀಯ ರೈಲ್ವೆಯಲ್ಲಿ 8.5 ಲಕ್ಷ ಕೋಟಿ ರೂಪಾಯಿಗಳನ್ನು ಸರ್ಕಾರ ಈ ವರ್ಷ ಹೂಡಿಕೆ ಮಾಡಲಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹ ತಿಳಿಸಿದ್ದಾರೆ.
ದೇಶದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಮತ್ತು ಹೊಸ ಪರೋಕ್ಷ ತೆರಿಗೆಗಳ ಆಡಳಿತಕ್ಕೆ ಹಾದಿ ಮಾಡಿಕೊಡಲು ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೆ ತರಲು ಸಹಕಾರ ನೀಡುವಂತೆ ಅವರು ವಿರೋಧಪಕ್ಷದ ನಾಯಕರನ್ನು ಮನವಿ ಮಾಡಿಕೊಂಡರು.
ಆಟೋಮೋಟಿವ್ ಕಾಂಪೊನೆಂಟ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ನ ವಾರ್ಷಿಕ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅವರು, ಮೂಲಭೂತ ಅಭಿವೃದ್ದಿ ಕಡೆ ಸರ್ಕಾರದ ಗಮನ ಕೇಂದ್ರಿಕೃತವಾಗಿದೆ.ಭಾರತೀಯ ರೈಲ್ವೆಯಲ್ಲಿ ದೀರ್ಘಕಾಲದ ಒಂದು ದಶಕಗಳಿಗೂ ಅಧಿಕ ಹೂಡಿಕೆ ಮಾಡಿದ ನಂತರ ಇದೀಗ ಎಂಟೂವರೆ ಲಕ್ಷ ಕೋಟಿಗೂ ಅಧಿಕ ಹಣವನ್ನು ಹೂಡಿಕೆ ಮಾಡಲು ಸರ್ಕಾರ ನಿಶ್ಚಯಿಸಿದೆ. ರಸ್ತೆ ಅಭಿವೃದ್ಧಿಯಲ್ಲಿ ಕೂಡ ಹೂಡಿಕೆ ಮಾಡಲಾಗುತ್ತದೆ ಎಂದರು.
ಕಳೆದ ಸಂಸತ್ತು ಅಧಿವೇಶನದಲ್ಲಿ ಸರಕು ಮತ್ತು ಸೇವಾ ತೆರಿಗೆ ಅನುಮೋದನೆಯಾಗದಿರುವುದು ಬೇಸರದ ಸಂಗತಿ.ಈ ಬಾರಿಯಾದರೂ ಮಸೂದೆ ಅನುಮೋದನೆಗೆ ಎಲ್ಲಾ ಸದಸ್ಯರು ಒಪ್ಪಿಗೆ ಸೂಚಿಸಬೇಕು ಎಂದು ಮನವಿ ಮಾಡಿದರು.