ಚೆನ್ನೈ: ತಾಂತ್ರಿಕ ದೋಷ ಹಿನ್ನೆಲೆ ಮಲೇಷ್ಯಾ ಏರ್ ಲೈನ್ಸ್ ನ ವಿಮಾನವೊಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿರುವ ಘಟನೆ ವರದಿಯಾಗಿದೆ.
ಸುಮಾರು 230 ಮಂದಿ ಪ್ರಯಾಣಿಕರನ್ನು ಹೊತ್ತ ಮಲೇಷ್ಯನ್ ಏರ್ ಲೈನ್ಸ್ ವಿಮಾನ ತುರ್ತು ಭೂ ಸ್ಪರ್ಶ ಮಾಡಿದ್ದು, ಪ್ರಯಾಣಿಕರೆಲ್ಲ ಸುರಕ್ಷಿತರಾಗಿದ್ದಾರೆ ಎಂದು ತಿಳಿದುಬಂದಿದೆ.
ಎಮ್ಸ್ ಟಾಯಿಮ್ ನಿಂದ ಕುವಾಲಾಲಂಪುರ್ ಗೆ ಹೊರಟಿದ್ದ ಮಲೇಷ್ಯನ್ ವಿಮಾನದಲ್ಲಿ ಕೆಲವು ತಾಂತ್ರಿಕ ದೋಷದಿಂದಾಗಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿತು. ಈ ತಾಂತ್ರಿಕ ದೋಷಗಳನ್ನು ಸರಿಪಡಿಸಿದ ಬಳಿಕ ವಿಮಾನ ಮತ್ತೆ ಹಾರಾಟ ಮುಂದುವರೆಸಿದೆ ಎಂದು ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಲೇಷ್ಯಾದ ಎಂಎಚ್ 370 ವಿಮಾನವು ಕಳೆದ ವರ್ಷ ಮಾರ್ಚ್ 8ರಂದು ಕ್ವಾಲಾಲಂಪುರದಿಂದ ಬೀಜಿಂಗ್‌ಗೆ ತೆರಳುವಾಗ ನಿಗೂಢವಾಗಿ ನಾಪತ್ತೆಯಾಗಿದ್ದು, ಸಿಬ್ಬಂದಿ ಮತ್ತು ಪ್ರಯಾಣಿಕರು ಸೇರಿದಂತೆ ಒಟ್ಟು 239 ಮಂದಿ ಮೃತಪಟ್ಟಿದ್ದರು.