ನವದೆಹಲಿ: ಪ್ರಧಾನಿ ಮೋದಿ ಸರ್ಕಾರದ ಸಾಧನೆ, ಎದುಸುತ್ತಿ ರುವ ಸವಾಲುಗಳ ಪರಾಮರ್ಶೆಗಾಗಿ ಆಯೋಜಿಸಲಾಗಿದೆ ಎನ್ನಲಾದ ಮೂರು ದಿನಗಳ ಸಂಘ ಪರಿಹಾರ, ಬಿಜೆಪಿ ನಡುವಿನ ಮಹತ್ವದ ಸಮನ್ವಯ ಸಭೆ ಬುಧವಾರ ಆರಂಭವಾಗಿದೆ.
ಮೊದಲ ದಿನ ರಾಮಮಂದಿರ, ಭೂಸ್ವಾಧೀನ ವಿಧೇಯಕ ವಿಚಾರ ಪ್ರಸ್ತಾಪವಾಯಿತಾದರೂ ಮಹತ್ವವಾಗಿ ಚರ್ಚೆಗೆ ಬಂದದ್ದು ಒಆರ್‍ಒಪಿ ವಿಚಾರ ಎಂದು ಮೂಲಗಳು ತಿಳಿಸಿವೆ.
ನಿವೃತ್ತ ಸೇನಾನಿಗಳ ಆಮರಣಾಂತ ನಿರಶನವನ್ನು ಗಂಭೀರವಾಗಿ ಪರಿಗಣಿಸಿರುವ ಆರೆಸ್ಸೆಸ್ ಬಿಹಾರ ಚುನಾವಣೆಯನ್ನು ಗಮನದಲ್ಲಿಟ್ಟು ಕೊಂಡು ಶೀಘ್ರ ಒಆರ್ ಪಿಒ ಬಿಕ್ಕಟ್ಟು ಬಗೆಹರಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದೆ.
ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜಿ ಜೋಶಿ ಮತ್ತು ಜಂಟಿ ಪ್ರಧಾನ ಕಾರ್ಯದರ್ಶಿ ಗಳಾದ ದತ್ತಾತ್ರೇಯ ಹೊಸ ಬಾಳೆ, ಕೃಷ್ಣ ಗೋಪಾಲ್ ಅವರು ಒಆರ್‍ಒಪಿ ವಿಚಾರವಾಗಿ ಸಚಿವರ ಜತೆಗೆ ಪ್ರತ್ಯೇಕ ಸಭೆ ನಡೆಸಿದ್ದಾರೆ. ಅಗತ್ಯ ಬಿದ್ದರೆ ಯೋಜನೆ ಜಾರಿ ಯಿಂದಾಗುವ ಹಣಕಾಸು ಹೊರೆಯನ್ನು ನಿಭಾಯಿಸಲು ಆಯೋಗ ವೊಂದನ್ನು ರಚಿಸುವಂತೆಯೂ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.