ದೇಶ

ಲೆವೆಲ್ ಕ್ರಾಸಿಂಗ್ ಮುಕ್ತ ವಲಯ ಹೆಗ್ಗಳಿಕೆಗೆ ಪಶ್ಚಿಮ ಮಧ್ಯ ರೈಲ್ವೆ ವಿಭಾಗ

Mainashree

ನವದೆಹಲಿ: ದೇಶದಲ್ಲಿ ಮಾನವರಹಿತ ಲೆವೆಲ್ ಕ್ರಾಸಿಂಗ್ ವಲಯ ಎಂಬ ಹೆಗ್ಗಳಿಕೆಗೆ ಪಶ್ಚಿಮ ಮಧ್ಯ ರೈಲ್ವೆ ವಿಭಾಗ ಪಾತ್ರವಾಗಿದ್ದು, ತನ್ನ ವ್ಯಾಪ್ತಿಯ ಎಲ್ಲ 118 ಮಾನವರಹಿತ ಲೆವೆಲ್ ಕ್ರಾಸಿಂಗ್ ಗಳನ್ನೂ ಮಾನವ ನಿಯಂತ್ರಿತ, ಇಲ್ಲವೇ ಸಬ್‍ವೇ ವ್ಯವಸ್ಥೆ ಮೂಲಕ ಸುರಕ್ಷಿತ ಕ್ರಾಸಿಂಗ್ ಆಗಿ ಬದಲಾಯಿಸಿದೆ.

2014-15ರ ಅವಧಿಯಲ್ಲಿ 80, ಉಳಿದ ಕ್ರಾಸಿಂಗ್‍ಗಳನ್ನು ಈ ವರ್ಷದ ಆ.31ರ ಒಳಗೆ ಸಂಪೂರ್ಣ ಸುರಕ್ಷಿತ ಲೆವೆಲ್ ಕ್ರಾಸಿಂಗ್ ಆಗಿ ಪರಿವರ್ತಿಸಿದ್ದು, 30 ಕಡೆ ಮಾನವ ನಿಯಂತ್ರಿ ತ ಕ್ರಾಸಿಂಗ್, 33 ಕಡೆ ಸಬ್‍ವೇ ವ್ಯವಸ್ಥೆ ಮಾಡಲಾಗಿದೆ ಎಂದು ವಲಯ ರೈಲ್ವೆ ತಿಳಿಸಿದೆ.

ದೇಶದ ಒಟ್ಟು 29,487 ಲೆವೆಲ್ ಕ್ರಾಸಿಂಗ್ ಪೈಕಿ, 10,046 ಮಾನವರಹಿತವಾಗಿದೆ. ಅಪಘಾತ ಸಾಧ್ಯತೆಯ ಅಪಾಯಕಾರಿ ಕ್ರಾಸಿಂಗ್‍ಗಳಾಗಿವೆ.

SCROLL FOR NEXT