ಆಂಧ್ರ ವಿಧಾನಸಭೆ( ಸಂಗ್ರಹ ಚಿತ್ರ) 
ದೇಶ

ವೋಟಿಗಾಗಿ ನೋಟು ಪ್ರಕರಣ: ಅಂಧ್ರ ವಿಧಾನಸಭೆಯಲ್ಲಿ ಕೋಲಾಹಲ

ವೋಟಿಗಾಗಿ ನೋಟು ಪ್ರಕರಣ ಆಂಧ್ರ ಪ್ರದೇಶ ವಿಧಾನ ಸಭೆಯಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದೆ....

ಹೈದರಾಬಾದ್: ವೋಟಿಗಾಗಿ ನೋಟು ಪ್ರಕರಣ ಆಂಧ್ರ ಪ್ರದೇಶ ವಿಧಾನ ಸಭೆಯಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದೆ. ಪ್ರಶ್ನೋತ್ತರ ವೇಳೆ ಪ್ರತಿಪಕ್ಷ ವೈಎಸ್ ಆರ್ ಕಾಂಗ್ರೆಸ್ ಗದ್ದಲ ಆರಂಭಿಸಿತು.  

ವಿಧಾನಸಭೆ ಸ್ಪೀಕರ್ ಕೆ. ಶಿವಪ್ರಸಾದ ರಾವ್ 2 ಬಾರಿ ಸದನವನ್ನು ಮುಂದೂಡಿದ್ರು. ವೈಎಸ್ ಆರ್ ಕಾಂಗ್ರೆಸ್ ಸದಸ್ಯರು ಪ್ರಕಣ ಸಂಬಂಧ ಚರ್ಚೆ ನಡೆಸುವಂತೆ ಸ್ಪೀಕರ್ ಗೆ ಮನವಿ ಮಾಡಿದರು. ಆದರೆ ಇದಕ್ಕೆ ಸ್ಪೀಕರ್ ಸಮ್ಮತಿಸಲಿಲ್ಲ.  ವೈಎಸ್ ಆರ್ ಕಾಂಗ್ರೆಸ್ ಶಾಸಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.  ಹೀಗಾಗಿ ವಿಧಾನಸಭೆಯಲ್ಲಿ ತೀವ್ರ ಗದ್ದಲ- ಕೋಲಾಹಲ ಏರ್ಪಟ್ಟು ಕಲಾಪವನ್ನು ಮುಂದೂಡಲಾಯಿತು.

ಸರ್ಕಾರದ ಮುಖ್ಯ ಸಚೇತಕ ಕೆ. ಶ್ರೀನಿವಾಸಲು ಮಾತನಾಡಿ, ಈ ಪ್ರಕರಣ ಆಂಧ್ರ ಪ್ರದೇಶಕ್ಕೆ ಸಂಬಂಧಿಸಿದ್ದಲ್ಲ, ಹೀಗಾಗಿ ಚರ್ಚೆಮಾಡಿ ಅನಗತ್ಯವಾಗಿ ಸಮಯ ವ್ಯರ್ಥ ಮಾಡುವುದು ಸರಿಯಲ್ಲ ಎಂದು ತಿಳಿಸಿದರು. ಇದರಿಂದ ಆಕ್ರೋಶಗೊಂಡ ವಿಪಕ್ಷ ಸದಸ್ಯರು ಸದದ ಬಾವಿಗಿಳಿದು ಸರ್ಕಾರದ ವಿರುದ್ಧ ಘೋಶಣೆ ಕೂಗಿದರು. ಇದಾದ ನಂತರ ಸ್ಪೀಕರ್ ಸದನವನ್ನು ಮುಂದೂಡಿದರು.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

SCROLL FOR NEXT