ಬೋಧ ಗಯಾ ದೇವಾಲಯದ ಒಂದು ಚಿತ್ರ 
ದೇಶ

ಬೋಧ ಗಯಾಗೆ ಬಂದಿಳಿದ ಮೋದಿ

ಮೂರು ದಿನಗಳ ಅಂತರಾಷ್ಟ್ರೀಯ ಬೌದ್ಧ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ ಗಯಾ

ಪಾಟ್ನಾ: ಮೂರು ದಿನಗಳ ಅಂತರಾಷ್ಟ್ರೀಯ ಬೌದ್ಧ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ ಗಯಾ ಜಿಲ್ಲೆಗೆ ಶನಿವಾರ ಬಂದಿಳಿದಿದ್ದಾರೆ.

ಬಿಹಾರದ ರಾಜ್ಯಪಾಲ ರಾಮನಾಥ್ ಕೋವಿಂದ್ ಮತ್ತು ಸಚಿವ ಶ್ಯಾಮ್ ರಜಾಕ್ ಅವರು ಗಯಾ ವಿಮಾನ ನಿಲ್ದಾಣದಲ್ಲಿ ಮೋದಿಯವರನ್ನು ಸ್ವಾಗತಿಸಿದ್ದಾರೆ,

ಪಾಟ್ನಾ ದಿಂದ ೧೧೦ ಕಿಮೀ ದೂರದಲ್ಲಿರುವ ಬೋಧ ಗಯಾ ಬುದ್ಧ ಅನುಯಾಯಿಗಳಿಗೆ ಪವಿತ್ರ ಸ್ಥಳ ಮತ್ತು ಮೋದಿಯವರಿಗೆ ಇದು ಪ್ರಥಮ ಭೇಟಿ.

೯೦ ದೇಶಗಳಿಂದ ಬಂದಿರುವ ಗಣ್ಯರೊಂದಿಗೆ ಬೋಧ ಗಯಾ ದೇವಾಲಯ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಲಿದ್ದಾರೆ. ಶ್ರೀಲಂಕಾದ ಅಧ್ಯಕ್ಷ ಚಂದ್ರಿಕಾ ಕುಮಾರತುಂಗಾ ಅವರನ್ನು ಒಳಗೊಂಡಂತೆ ಜಪಾನ್, ಮಯನ್ಮಾರ್, ನೇಪಾಳ, ಭೂತಾನ್ ಮತ್ತು ತೈವಾನಿನ ವಿದೇಶಾಂಗ ಸಚಿವರು ಭಾಗವಹಿಸಲಿದ್ದಾರೆ.

ಬೋಧ ಗಯಾದಲ್ಲಿ ವಿಶೇಷ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel