ಕರಾಚಿ: 1965 ರ ಯುದ್ಧದಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಹೀನಾಯ ಸೋಲು ಕಂಡಿತ್ತು ಎಂದು ಪಾಕಿಸ್ತಾನದ ಇತಿಹಾಸ ತಜ್ಞರೊಬ್ಬರು ಒಪ್ಪಿಕೊಂಡಿದ್ದಾರೆ.
ರಾಜಕೀಯ ವಿಶ್ಲೇಷಕರು ಆಗಿರುವ ಅಕ್ಬರ್ ಎಸ್.ಝೈದಿ, ಪಾಕ್ ವಿರುದ್ಧದ 1965 ಯುದ್ಧದ ಬಗ್ಗೆ ಮಾತನಾಡಿದ್ದು, ಯುದ್ಧದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿತ್ತು ಎಂಬುದು ಸುಳ್ಳು ಎಂದು ಹೇಳಿದ್ದಾರೆ. ಸೈದ್ಧಾಂತಿಕ ದೃಷ್ಟಿಕೋನದಿಂದ ಪಾಕಿಸ್ತಾನದಲ್ಲಿ ಇತಿಹಾಸ ಕಲಿಸಲಾಗುತ್ತಿದ್ದು, ಜನರಿಗೆ ಸತ್ಯದ ಅರಿವಿಲ್ಲ ಎಂದು ಹೇಳಿದ್ದಾರೆ.
ಕ್ವೆಶ್ಚನಿಂಗ್ ಪಾಕಿಸ್ತಾನ್ಸ್ ಹಿಸ್ಟರಿ ಎಂಬ ವಿಷಯದ ಬಗ್ಗೆ ಉಪನ್ಯಾಸದಲ್ಲಿ ಭಾಗವಹಿಸಿ ಮಾತನಾಡಿದ ಅಕ್ಬರ್ ಝೈದಿ, ವಿದ್ಯಾರ್ಥಿಗಳಿಗೆ ಪಾಕಿಸ್ತಾನದ ಜನಗಳ ಇತಿಹಾಸದ ಬಗ್ಗೆ ಕಲಿಸಲಾಗುತ್ತಿಲ್ಲ, ಬದಲಾಗಿ ಪಾಕಿಸ್ತಾನದ ನಿರ್ಮಾಣದ ಬಗ್ಗೆ ಹೇಳಿಕೊಡಲಾಗುತ್ತಿದೆ ಎಂದು ಅಸಮಾಧಾನವ್ಯಕ್ತಪಡಿಸಿದ್ದಾರೆ. 1965 ರ ಯುದ್ಧದ ಸ್ಮರಣೆ ಮಾಡಲಾಗುತ್ತದೆ. ಯುದ್ಧದಲ್ಲಿ ಪಾಕಿಸ್ತಾನ ಜಯಗಳಿಸಿತ್ತು ಎಂಬುದಕ್ಕಿಂತಲೂ ದೊಡ್ಡ ಸುಳ್ಳು ಮತ್ತೊಂದು ಇರಲು ಸಾಧ್ಯವಿಲ್ಲ. ನಾವು 65 ಯುದ್ಧವನ್ನು ಭೀಕರವಾಗಿ ಸೋತಿದ್ದೆವು ಎಂದು ಅಕ್ಬರ್ ಎಸ್.ಝೈದಿ ಹೇಳಿದ್ದಾರೆ. ಸತ್ಯವನ್ನು ರಿಯಬೇಕಾದರೆ ಶುಜಾ ನವಾಜ್ ಅವರ ಕ್ರಾಸ್ಡ್ ಸ್ವೋರ್ಡ್ ಪುಸ್ತಕವನ್ನು ಓದಲು ಜನರಿಗೆ ಕರೆ ನೀಡಿದ್ದಾರೆ.