ಮುಂಬೈ: ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಶೀನಾ ಬೋರಾ ಹತ್ಯೆಯಾಗಿದೆ ಎಂಬ ಗುಮಾನಿಗಳಿಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅದಕ್ಕೆ ಪೂರಕವಾಗಿ ಸ್ಟಾರ್ನ ಮಾಜಿ ಸಿಇಒ ಪೀಟರ್ ಮುಖರ್ಜಿ ಬ್ರಿಟನ್ ಮತ್ತು ಸ್ಪೇನ್ನಲ್ಲಿ ಹೊಂದಿರುವ ಉದ್ದಿಮೆಗಳು, ಅವುಗಳಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳ ವಿವರಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ.
ಇದೇ ವೇಳೆ ಸತತ ಮೂರನೇ ದಿನವಾದ ಶುಕ್ರವಾರ ಕೂಡ ಮುಖರ್ಜಿ ವಿಚಾರಣೆ ನಡೆಯಿತು. ಈ ನಡುವೆ, ಪೀಟರ್ ದತ್ತು ತೆಗೆದುಕೊಂಡಿರುವ ಇಂದ್ರಾಣಿ-ಸಂಜೀವ್ ಖನ್ನಾ ಮಗಳು ವಿಧಿಯನ್ನು ಕೂಡ ವಿಚಾರಣೆ ಗೊಳಪಡಿಸಲಾಗಿದೆ.
ಜತೆಗೆ ಇಂದ್ರಾಣಿಯ ಮೊದಲ ಪತಿ ಹಾಗೂ ಶೀನಾ ತಂದೆ ಸಿದ್ಧಾರ್ಥ್ ದಾಸ್ರನ್ನು 2ನೇ ದಿನವೂ ವಿಚಾರಣೆ ನಡೆಸಿದ ಪೊಲೀಸರು ಅವರ ಡಿಎನ್ಎ ಪರೀಕ್ಷೆಗಾಗಿ ರಕ್ತದ ಮಾದರಿ ಪಡೆದಿದ್ದಾರೆ.