ಚೆನ್ನೈ: ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಟಿವಿ ಆ್ಯಂಕರ್ ಅಮೃತ ರೈ ಅವರನ್ನು ವಿವಾಹವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
68 ವಯಸ್ಸಿನ ದಿಗ್ವಿಜಯ್ ಸಿಂಗ್ 44 ಹರೆಯದ ಅಮೃತ ರೈ ಅವರನ್ನು ಮದುವೆ ಆಗಿದ್ದು, ಕಳೆದ ತಿಂಗಳು ಚೆನ್ನೈನಲ್ಲಿ ಮದುವೆಯಾಗಿರುವುದಾಗಿ ಘೋಷಿಸಿದ್ದಾರೆ. ಮದುವೆ ನಂತರ ಅಮೃತ ರೈ ಮತ್ತು ದಿಗ್ವಿಜಯ್ ಸಿಂಗ್ ಅಮೆರಿಕಾಗೆ ತೆರಳಿದ್ದಾರೆ. ರಾಜ್ಯಸಭಾ ಟಿವಿ ಆ್ಯಂಕರ್ ಆಗಿ ಕೆಲಸ ಮಾಡುತ್ತಿದ್ದ ಅಮೃತ ರೈ ಅವರೊಂದಿಗೆ ಸಂಬಂಧವಿರುವುದಾಗಿ ದಿಗ್ವಿಜಯ್ ಸಿಂಗ್ ಅವರು ಕಳೆದ ಏಪ್ರಿಲ್ 30ರಂದು ಒಪ್ಪಿಕೊಂಡಿದ್ದರು.
ದಿಗ್ವಿಜಯ್ ಸಿಂಗ್ ಅವರ ಪತ್ನಿ 2013ರಲ್ಲಿ ಕ್ಯಾನ್ಸೆರ್ ನಿಂದ ಮೃತಪಟ್ಟಿದ್ದರು. ದಿಗ್ವಿಜಯ್ ಸಿಂಗ್ ಅವರು ಮಧ್ಯಪ್ರದೇಶದ ರಾಜಮನೆತನಕ್ಕೆ ಸೇರಿದವರು.