ಜಮ್ಮು; ಪೂಂಚ್ ನ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೈನಿಕರ ಗುಂಡಿನ ದಾಳಿ ತೀವ್ರತೆಯಾಗಿದ್ದು, ಓರ್ವ ನಾಗರೀಕ ಸಾವನ್ನಪ್ಪಿರುವುದಾಗಿ ಸೋಮವಾರ ವರದಿಯಾಗಿದೆ.
ಕಳೆದ ಹಲವು ತಿಂಗಳಿನಿಂದಲೂ ಕದನ ವಿರಾಮ ಉಲ್ಲಂಘಿಸುತ್ತಲೇ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವ ಪಾಕಿಸ್ತಾನ ಸೇನೆಯು ಇಂದು ಸಹ ತನ್ನ ಉಚ್ಚಾಟವನ್ನು ಮುಂದುವರೆಸಿದ್ದು, ಗುಂಡಿನ ದಾಳಿಯಲ್ಲಿ ಓರ್ವ ನಾಗರೀಕ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಶುಕ್ರವಾರ ಮಧ್ಯರಾತ್ರಿಯಿಂದಲೇ ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿಯನ್ನು ಎಡೆಬಿಡದೆ ಮಾಡುತ್ತಿದ್ದು, ಅಪ್ರಚೋದಿತ ಶೆಲ್ ಹಾಗೂ ಗ್ರೆನೇಡ್ ದಾಳಿಗಳನ್ನು ಮಾಡುತ್ತಿದೆ. ಗುಂಡಿನ ದಾಳಿಗೆ ಭಾರತೀಯ ಸೇನೆ ದಿಟ್ಟ ಉತ್ತರ ನೀಡುತ್ತಿದೆ.