ದೇಶ

ತಿರುಪತಿಯಲ್ಲಿ ಆರಂಭವಾಗಲಿದೆ ಹೆಲಿ ಟೂರಿಸಂ

Rashmi Kasaragodu

ಹೈದ್ರಾಬಾದ್: ಸೆಪ್ಟೆಂಬರ್ 16 ರಿಂದ ತಿರುಪತಿಯಲ್ಲಿ ಹೆಲಿ ಟೂರಿಸಂ ಅಥವಾ ಹೆಲಿಕಾಪ್ಟರ್ ಟೂರಿಸಂ ಆರಂಭವಾಗಲಿದೆ.  ವಿಶೇಷವೆಂದರೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಈ ಬಾರಿ ತಿರುಮಲದಲ್ಲಿ ಬಾಲಾಜಿಗೆ ಬ್ರಹ್ಮೋತ್ಸವ ನಡೆಯುವಾಗ ಪ್ರವಾಸಿಗಳಿಗೆ ಅದನ್ನು ನೋಡುವ ಅವಕಾಶ ಕಲ್ಪಿಸಲು ಸಿದ್ಧತೆ ನಡೆಸುತ್ತಿದೆ.

ಸುದ್ದಿ ಪತ್ರಿಕೆಯೊಂದರ ಪ್ರಕಾರ ಮೂರು ಹೆಲಿ ಕಾಪ್ಟರ್ ಗಳನ್ನು ಹೆಲಿ ಟೂರಿಸಂಗಾಗಿ ಬಳಸಲಾಗುತ್ತದೆ. ತಿರುಚನೂರಿನಲ್ಲಿರುವ ದೇವಿ ಪದ್ಮಾವತಿ ಮತ್ತು  ಶ್ರೀನಿವಾಸ ಮಂಗಾಪುರಂನಲ್ಲಿರುವ ಕಲ್ಯಾಣ ವೆಂಕಟೇಶ್ವರ ದೇಗುಲದ ಪೂಜೆಗಳನ್ನು ನೋಡಲು ಪ್ರವಾಸಿಗಳಿಗೆ ಹೆಲಿ ಟೂರಿಸಂ ಕಲ್ಪಿಸಲಾಗುತ್ತದೆ. ಅದರೊಂದಿಗೆ ಪ್ರವಾಸಿಗಳಿಗೆ ಹೆಲಿಕಾಪ್ಟರ್‌ನಲ್ಲಿ 20 ನಿಮಿಷಗಳ ಕಾಲ ತಿರುಪತಿಯ ಪಕ್ಷಿನೋಟ ಮತ್ತು ವಿಜಯನಗರದ ಐತಿಹಾಸಿಕ ಚಂದ್ರಗಿರಿ ಕೋಟೆಯನ್ನು ತೋರಿಸಲಾಗುವುದು.

ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ತಿರುಪತಿಯಲ್ಲಿ ಹೆಲಿಟೂರಿಸಂ ಆರಂಭಿಸಲಾಗುತ್ತದೆ. ನೂತನವಾಗಿ ತಿರುಮಲ ಬೆಟ್ಟಗಳನ್ನು ವೀಕ್ಷಣೆ ಮಾಡುವ ಪ್ಯಾಕೆಜ್‌ನ್ನು ಕೂಡಾ ಶೀಘ್ರದಲ್ಲೇ ಆರಂಭಿಸಲು ಪ್ರವಾಸೋದ್ಯಮ ಇಲಾಖೆ ಸಿದ್ಧತೆ ನಡೆಸುತ್ತಿದೆ.

SCROLL FOR NEXT