ದೇಶ

ಡಿಜಿಟಲ್ ರೂಪದಲ್ಲಿ ಮಹಾತ್ಮಾ ಗಾಂಧಿ ಬರವಣಿಗೆ

Mainashree

ನವದೆಹಲಿ: ಮಹಾತ್ಮಾಗಾಂದಿಯವರ ಬರವಣಿಗೆಗಳನ್ನೂ ಡಿಜಿಟಲ್ ರೂಪಕ್ಕಿಳಿಸಲಾಗಿದೆ. ಹೌದು, ಇನ್ನು ಮುಂದೆ ಓದುಗರಿಗೆ ಮಹಾತ್ಮಾಗಾಂಧಿ ಅವರ ಬರವಣಿಗೆ ಡಿಜಿಟಲ್ ರೂಪದಲ್ಲೂ ಸಿಗಲಿದೆ.

ರಾಮಚರಿತಮಾನಸದ ಬಳಿಕ ಮಹಾತ್ಮಾಗಾಂದಿಯವರ ಬರವಣಿಗೆಗಳನ್ನೂ ಡಿಜಿಟಲ್ ರೂಪಕ್ಕಿಳಿಸಲಾಗಿದ್ದು, ಅವರ ಬರವಣಿಗೆ, ಭಾಷಣ ಮತ್ತು ಪ್ರಕಟವಾಗಿರುವ ಲೇಖನಗಳನ್ನೇ ಆಧರಿಸಿ ಗಾಂಧಿ ಹೆರಿಟೇಜ್ ಪೋರ್ಟ್ಲ್ ಸಿದ್ಧಪಡಿಸಲಾಗಿದೆ.

ಮಹಾತ್ಮ ಗಾಂಧಿ ಅವರ ಬರವಣಿಗೆ ಮತ್ತು ಅವರಿಗೆ ಸಂಬಂಧ ಪಟ್ಟ ದಾಖಲೆಗಳ ಬಗ್ಗೆ 100 ಆವೃತ್ತಿಗಳನ್ನು ಹೊರತರಲಿದ್ದು, ಇದು ಡಿವಿಡಿ ರೂಪದಲ್ಲಿ ಲಭ್ಯವಾಗಲಿದೆ.ಇದನ್ನು ಸೆಪ್ಟೆಂಬರ್ 8ಕ್ಕೆ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

SCROLL FOR NEXT