ಎನ್ಐಎ 
ದೇಶ

ಎನ್ಎಸ್ ಸಿಎನ್(ಕೆ) ಉಗ್ರರ ಬಗ್ಗೆ ಮಾಹಿತಿ ನೀಡುವವರಿಗೆ 17 ಲಕ್ಷ ರು. ಬಹುಮಾನ: ಎನ್ಐಎ

ಎನ್.ಎಸ್.ಸಿ.ಎನ್(ಕೆ) ಗೆ ಸೇರಿದ ಇಬ್ಬರು ಪ್ರಮುಖ ಉಗ್ರರ ಬಗ್ಗೆ ಮಾಹಿತಿ ನೀಡಿದವರಿಗೆ ರಾಷ್ಟ್ರೀಯ ತನಿಖಾದಳ 17 ಲಕ್ಷ ರು ಬಹುಮಾನ ಘೋಷಿಸಿದೆ.

ನವದೆಹಲಿ: ಎನ್ಎಸ್ ಸಿಎನ್(ಕೆ) ಗೆ ಸೇರಿದ ಇಬ್ಬರು ಪ್ರಮುಖ ಉಗ್ರರ ಬಗ್ಗೆ ಮಾಹಿತಿ ನೀಡಿದವರಿಗೆ ರಾಷ್ಟ್ರೀಯ ತನಿಖಾದಳ 17 ಲಕ್ಷ ರು ಬಹುಮಾನ ಘೋಷಿಸಿದೆ.

ಉಗ್ರ ಸಂಘಟನೆಯ ಅಧ್ಯಕ್ಷ ಶಂಗ್ವಾಂಗ್ ಶಂಗ್ಯುಂಗಿ ಖಪ್ಲಂಗ್ ಬಗ್ಗೆ ಮಾಹಿತಿ ನೀಡಿದವರಿಗೆ 7 ಲಕ್ಷ ಹಾಗೂ ಮತ್ತೊಬ್ಬ ಉಗ್ರ ನಿಕಿ ಸುಮಿ ಬಗ್ಗೆ ಮಾಹಿತಿ ನೀದಿದವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ದಳ ಹೇಳಿದೆ.

ಇಂದಿರಾ ಗಾಂಧಿ ಸ್ಟೇಡಿಯಂ ನಲ್ಲಿ ಅಸ್ಸಾಮ್ ರೈಫಲ್ಸ್ ಸಿಬ್ಬಂದಿಯ ಮೇಲೆ ದಾಳಿ ನಡೆಸಲು ಎನ್ಎಸ್ ಸಿಎನ್(ಕೆ) ಉಗ್ರ ಸಂಘಟನೆಯ ಉಗ್ರರು ಸಂಚು ರೂಪಿಸಿದ್ದರು. ಜೂನ್ 4 ರಂದು ಮಣಿಪುರದಲ್ಲಿ ದೋಗ್ರಾ ರೆಜಿಮೆಂಟ್ ಮೇಲೆ ನಡೆದ ದಾಳಿಯಲ್ಲೂ ಈ ಇಬ್ಬರು ಉಗ್ರರಿದ್ದರು ಎಂದು ಎನ್ಐಎ ತಿಳಿಸಿದೆ. ಉಗ್ರರ ಬಂಧನಕ್ಕೆ ಉಪಯುಕ್ತ ಮಾಹಿತಿ ನೀಡಿದವರಿಗೆ  17 ಲಕ್ಷ ರು ಬಹುಮಾನ ನೀಡುವುದಾಗಿ ಎನ್ಐಎ ತಿಳಿಸಿದೆ. ಮಾಹಿತಿ ನೀಡಿದ ವ್ಯಕ್ತಿಯ ಗುರುತನ್ನು  ಗೌಪ್ಯವಾಗಿಡಲಾಗುವುದು ಎಂದು ಎನ್ಐಎ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾವೇರಿಗೆ ಸಂಧಾನ ಸೂತ್ರ: ಆಗಸ್ಟ್ 3 ರಂದು ತಮಿಳುನಾಡು ಸಿಎಂ ವಿಜಯ್ ಬೆಂಗಳೂರಿಗೆ ಬರುವುದು ಡೌಟು? ಇದೇ ಕಾರಣ...!

ಪರೀಕ್ಷಾ ವ್ಯವಸ್ಥೆ ಸುಧಾರಣೆ: ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಟಾಸ್ಕ್ ಫೋರ್ಸ್ ರಚನೆ; ಪ್ರಧಾನಿ ಮೋದಿ ಘೋಷಣೆ! Video

ಅಕ್ರಮ ಪಾರ್ಕಿಂಗ್, ಬಹಿರಂಗ ಮೂತ್ರವಿಸರ್ಜನೆ; 'ಯೆಲ್ಲೋ ಸ್ಪಾಟ್' ಆದ ಶೇಷಾದ್ರಿ ರಸ್ತೆ?

CWG 2026: ಗ್ಲಾಸ್ಗೋದಲ್ಲಿ ಮೀರಾಬಾಯಿ ಚಾನು ಐತಿಹಾಸಿಕ ಸಾಧನೆ; ದೇಶದಾದ್ಯಂತ ಸಂಭ್ರಮ, ಪ್ರಧಾನಿ ಮೋದಿ ಶ್ಲಾಘನೆ

3rd T20: ಜಿಂಬಾಬ್ವೆ ವಿರುದ್ಧ 35 ರನ್ ಗೆಲುವು; 3-0 ಅಂತರದಿಂದ ಸರಣಿ 'ಕ್ಲೀನ್ ಸ್ವೀಪ್' ಮಾಡಿದ ಭಾರತ!